Sunday 1 August 2021

ಎಂದಿಗೆ ನಿಮ್ಮ ಪದ ಕಾಂಬೆನೊ ಗುರು ಎಂದಿಗೆ ankita gopalakrishna vittala

ಎಂದಿಗೆ ನಿಮ್ಮ ಪದ ಕಾಂಬೆನೊ | ಗುರು

ಎಂದಿಗೆ ನಿಮ್ಮ ಪದ ಕಾಂಬೆನೊ ಪ.


ಎಂದಿಗೆ ನಿಮ್ಮ ಕಾಂಬೆ

ಅಂದಿಗೆ ಮುಕ್ತಳಹೆ ಅ.ಪ.


ಸಕಲ ಶಾಸ್ತ್ರಗಳನೆ ಶೋಧಿಸಿ | ಬಹು

ಅಕಳಂಕ ತತ್ವವ ಸಾಧಿಸಿ | ಬೇಗ

ಮುಕುತಿ ಯೋಗ್ಯರಿಗೆಲ್ಲ

ಸುಖವ ತೋರುವ ಗುರು 1

ಮನದಿ ನೆಲಸಿ ಲೀಲೆ ತೋರುತ | ದೃಢ

ಮನದಿ ಮನಸಿಜನ ಗೆಲ್ಲುತ | ದೇವ

ಮನಸಿಜನಯ್ಯನ

ಮನಸಿನೊಳ್ ತೋರುತ 2

ಕಷ್ಟಪಡುವುದು ಕಾಣುತ | ಬಹು

ತುಷ್ಟರಾಗಿ ಅಭಯ ನೀಡುತ | ಮನ

ಮುಟ್ಟಿ ರಕ್ಷಿಪೆನೆಂದು

ಇಷ್ಟು ಸಲಿಪ ಗುರು 3

ನರಹರಿ ಧ್ಯಾನಿಪ ಶ್ರೀ ಗುರು | ಬಹು

ಕರುಣಾಳುವೆ ದೇವತರು | ನಿಮ್ಮ

ಅರಘಳಿಗೆ ಬಿಟ್ಟು

ಇರಲಾರೆ ಧರೆಯೊಳು 4

ಮುಕ್ತಿ ಸೌಭಾಗ್ಯವ ನೀಡುವ | ಬಹು

ಶಕ್ತರಹುದು ನಿಮ್ಮ ಭಾವವ | ನಾನು

ಎತ್ತ ಯೋಚಿಸೆ ಕಾಣೆ

ಸತ್ಯವಚನವಿದು 5

ಆನಂದಪಡಿಸುವ ಶ್ರೀ ಗುರು | ನಿಮ್ಮ

ಏನೆಂದು ಸ್ತುತಿಹಲಿ ಪಾಮರರು | ನಿಮ್ಮ

ಕಾಣರು ಜಗದಲಿ

ಏನೆಂಬೆ ಮಹಿಮೆಯ 6

ಗೋಪಾಲಕೃಷ್ಣವಿಠ್ಠಲನ | ಶುಭ

ರೂಪವ ತೋರುವ ಕಾರುಣ್ಯ | ದೇವ

ಈ ಪರಿ ನಿಮ್ಮ ಸ್ತುತಿಸಿ

ನಾ ಪಾರು ಕಾಂಬೆನು 7

****

 

No comments:

Post a Comment