Sunday 1 August 2021

ತಂದೆ ವೆಂಕಟೇಶನೆಂದೆ ಪುರಂದರ ದಾಸರ ankita uragadrivasa vittala ಅಂಕಿತ ಪದ tandevenkatesha vittala dasa stutih

 

ತಂದೆ ವೆಂಕಟೇಶನೆಂದೆ । ಪು ।
ರಂದರ ದಾಸರ ಪ್ರಿಯನಿವನೆಂದೆ ।। ಪಲ್ಲವಿ ।।

ತಂದೆ ಜನ್ಮ ಜನ್ಮಂಗಳಲಿ । ಎಂ ।
ದೆಂದು ಭವ ಮೋಚನದೊಳು ತಂದೆ ।
ಇಂದು ವಿಷಯದಿ ತಂದೆದಂದುಗೆ ಬಿಡಿಸೆಂದೆ ।
ನಿಂದು ಹೃನ್ಮಂದಿರಾರವಿಂದದೊಳು ನಿಂದೆ ।। ಚರಣ ।।

ಕಾಲ ಕಾಲಡಿ ತಂದೆ ವಾಕು ಮನಕೆ ।
ನಿಲುಕಾದಲಿಹೆ ತಂದೆ ।
ಬಾಲ್ಯ ಯೌವನ ಜರಾ ।।
ಲಯಾದ್ಯವಸ್ಥೆಯ ತಂದೆ ।
ಕಾಲ ಕರ್ಮಗಳಲ್ಲಿ ಕಾರ್ಯ ಪ್ರೇರಣೆಗೆಲ್ಲ ।। ಚರಣ ।।

ಚತುರ ರೂಪದಿ ನಿಂದೆ ತಂದೇ ।
ಚತುರ ರೂಪದಿ ತಂದೆ ।
ನುತಿಪೆನೊ ಉರಗಾದ್ರಿ ವಾಸ ವಿಠ್ಠಲ । ಅ ।
ಪ್ರತಿ ಮಹಿಮ ಸೃಷ್ಟಿ ಸ್ಥಿತಿ ಲಯಕೆಲ್ಲ ।। ಚರಣ ।।
***

Tande Venkatesha Vittala Dasaru

ಹೆಸರು : ಪರಮಪೂಜ್ಯ ಶ್ರೀ ಆರ್ ರಾಮಚಂದ್ರರಾಯರು

ಕಾಲ : ಕ್ರಿ ಶ 1907 - 1982
ಅಂಕೀತೋಪದೇಶ : ಶ್ರೀ ಉರಗಾದ್ರಿವಾಸವಿಠ್ಠಲರು
ಅಂಕಿತ :  ಶ್ರೀ ತಂದೆ ವೇಂಕಟೇಶ ವಿಠ್ಠಲ
" ಅಂಕಿತ ಪದ "
***

No comments:

Post a Comment