" ಅಂಕಿತ ಪದ "
ರಾಗ : ಬಿಲಹರಿ ತಾಳ : ಆದಿ
ವೆಂಕಟೇಶನೆಯೆನ್ನ ಪಾಲೀಪುದೂ ।
ಕಿಂಕರಾರ್ತಿಹರಣ ।। ಪಲ್ಲವಿ ।।
ಪಂಕಜೋದ್ಭವ ಹರ ವಂದ್ಯ ಪರಾತ್ಪರ ।
ನಿಖಿಳಾಗಮ ವಿಜ್ಞೇಯ ಲೋಕೊದ್ಧಾರ ।। ಅ ಪ ।।
ಇಂದು ಮಂದವಾರ ಚೈತ್ರ ವತ್ಸರ ಬಹುಧಾನ್ಯ ।
ಸಂದ ಶುಕ್ಲ ದ್ವಿತೀಯಾ ಸಂಧ್ಯಾಸವನ ।
ಬಂದು ಕೀರ್ತನ ಸೇವಾ ನಂತರದಿ ಯೆನ್ನ ।।
ಮಂದಿರದೊಳು ಸುಪ್ತಾವಸ್ಥೆಯೊಳಿರಲಾಗ ।
ಅಂದು ಕಡೆಯ ಯಾಮದಿ ತೈಜಸನೆ ನೀ । ಹಂಸ ।
ರಿಂದೆನ್ನ ಮನ ಸಂಶಯ ಹರಿಸಿದೆ ।। ಚರಣ ।।
ಅರುಣಾ ಉದಯದೊಳೆದ್ದೂ ಮುದದೀ ।
ಕರುಣಾ ಶುದ್ಧನಾಗೀ ।
ತ್ವರಿತದಿ ಸ್ವಪ್ನವಿವರಕಾಗಿ ಹರುಷದೀ ।
ಹರಿ ಪೂಜಾ ಕಾಲದಿ ಅರುಹಿದಾ ।
ಮರುತ ಮೂರುತಿಯಾ ।।
ಉರುತರ ಚರಿತೆಯ ।
ನಿರುತ ಪಾಡಿ ಪೊಗಳಲಾಣತಿಯಿತ್ತ ।
ತಿರುಪತಿ ಶೈಲಾಧಿಪ ಮಮ ಕುಲ ಸ್ವಾಮೀ ।। ಚರಣ ।।
ಸಾರಸದ್ಭಕುತಿಯನೂ ಕರುಣಿಸು ।
ಹರಿ ಗುರು ಸೇವೆಯನೂ ।
ಸಾರ್ವಸದ್ಯೋಗ್ಯ ಸಾಧನವನ್ನೂ ।
ಪರಮಹಂಸರು ಇತ್ತ ।।
ಶ್ರೀ ವೆಂಕಟೇಶಾಂಕಿತ ಮೂರುತಿಯನೆ ನುತಿಪ ।
ನಿಜ ಹರಿ ಭಕುತರ ಚರಣ ಕಮಲ -
ಬಂಡುಣಿಯೆಂದೆನಿಸಿ ಇವನ ।
ನಿರುತ ರಕ್ಷಿಸೋ ಉರಗಾದ್ರಿವಾಸವಿಠ್ಠಲ ।। ಚರಣ ।।
****
ವೇಂಕಟೇಶನೆ ಎನ್ನಾ ಪಾಲಿಪುದೊ
ಕಿಂಕರಾರ್ತಿ ಹರಣ ಪ
ಪಂಕಜೋದ್ಭವ ಹರ ವಂದ್ಯ ಪರಾತ್ಪರ
ನಿಖಿಲಾಗಮೈಕವಿಜ್ಞೇಯ ಲೋಕೋದ್ಧಾರ ಅ.ಪ
ಇಂದು ಮಂದವಾರ ಚೈತ್ರ ವತ್ಸರ ಬ-
ಹುಧಾನ್ಯ ಸಂದ ಶುಕ್ಲ ದ್ವಿತೀಯ
ಸಂಧ್ಯಾಸವನ ಬಂದು ಕೀರ್ತನ ಸೇವಾ-
ನಂತರದಿ ಎನ್ನಾ ಮಂದಿರದೊಳು ಸುಪ್ತಾವಸ್ಥೆ
ಯಿಂದಿರಲಾಗ ಅಂದು ಕಡೆಯ ಯಾ-
ಮದಿ ತೈಜಸನೆ ನೀ ಹಂಸರಿಂದೆನ್ನ ಮನಸಂಶಯ ಹರಿಸಿದೆ1
ಅರುಣೋದಯಲೆದ್ದು ಮುದದಿ
ಕರಣಶುಧ್ದನಾಗಿ ತ್ವರಿತದಿ ಸ್ವಪನದ ವಿ-
ವರಕಾಗಿ ಹರುಷದಿ ಹರಿಪೂಜಾಕಾಲದಿ
ಅರುಹಿದ ಮರುತ ಮೂರುತಿಯಾ
ಉರುತರ ಚರಿತೆಯ ನಿರುತಪೊಗಳಲಾಯತವಿತ್ತ
ತಿರುಪತಿಶೈಲಾಧಿಪ ಮಮಕುಲಸ್ವಾಮಿ2
ಸಾರ ಸದ್ದ್ಭಕುತಿಯನು ಕರುಣಿಸೋ
ಹರಿಗುರುಸೇವೆಯನು ಸರ್ವಸದ್ಯೋಗ್ಯಸಾಧನವನ್ನು
ಪರಮಹಂಸರು ಇತ್ತವೇಂಕಟೇಶಾಂಕಿತ
ಮೂರುತಿಯ ನುತಿಪಾ ನಿಜ ಹರಿಭಕುತರ
ಚರಣಕಮಲಬಂಡುಣಿಯೆನಿಸಿ ಇವನನಿರುತ ರಕ್ಷಿಸೋ ಉರಗಾದ್ರಿವಾಸವಿಠಲಾ 3
****
Tande Venkatesha Vittala Dasaru
ಹೆಸರು : ಪರಮಪೂಜ್ಯ ಶ್ರೀ ಆರ್ ರಾಮಚಂದ್ರರಾಯರು
ಕಾಲ : ಕ್ರಿ ಶ 1907 - 1982
ಅಂಕೀತೋಪದೇಶ : by ಶ್ರೀ ಉರಗಾದ್ರಿವಾಸವಿಠ್ಠಲರು
ಅಂಕಿತ : ಶ್ರೀ ತಂದೆ ವೇಂಕಟೇಶ ವಿಠ್ಠಲ
" ಅಂಕಿತ ಪದ "
***
No comments:
Post a Comment