ರಾಗ: ಪೂರ್ವಿಕಲ್ಯಾಣಿ ತಾಳ: ಆದಿ
ಚರಣಸೇವೆಯ ನೀಡು ಗುರು ರಾಘವೇಂದ್ರ ಪ
ಚರಣಸೇವೆಯ ನೀಡು ಕರುಣವನು ನೀ ಮಾಡು
ಶರಣುಬಂದೆನು ನನ್ನ ದುರಿತಗಳನೀಡ್ಯಾಡು ಅ.ಪ
ಅಸುರಕುಲಲತೆಯ ಹೊಸ ಕುಸುಮ ನೀನರಿದು
ಎಸೆವ ಪರಿಮಳವೆಲ್ಲ ದಿಸೆಗಳಲಿ ನೀ ಸುರಿದು
ವಸುಧೆಯಲಿ ನರಹರಿಯ ಕಂಭದಲಿ ನೀ ಕರೆದು
ಅಸಮಗುರು ನಿಂದಿರುವೆ ವರಗಳನು ಮಳೆಗರೆದು 1
ಯತಿಚಂದ್ರ ನೀನಾಗಿ ಹಿತದಿ ಚಂದ್ರಿಕೆ ಬೀರಿ
ಮತಿವಂತ ಮಹಿಮರಿಗೆ ಮಾರ್ಗವನು ತೋರಿ
ಅತಿಕ್ರೂರ ಕುಹುಯೋಗನೀಗೆ ಸಿಂಹಾಸನವೇರಿ
ಪ್ರತಿರಹಿತ ಶ್ರೀಕೃಷ್ಣಭಕ್ತಿ ಮೆರೆಸಿದ ಸೂರಿ 2
ಕಾಮಿತಾರ್ಥವ ಬೇಡಿ ಹೊಕ್ಕು ಮಂತ್ರಾಲಯವ
ನೇಮದಿಂದಲಿ ಬಂದ ಭಕ್ತರೆಲ್ಲರ ಭಯವ
ಸ್ವಾಮಿ ಸೀತರಾಮವಿಠಲ ಕಳೆಯುತ ದಯವ
ತಾ ಮಾಡಿ ತಂದೀವ ನಿನಗೆ ಕೀರ್ತಿಯ ಜಯವ 3
***
No comments:
Post a Comment