Thursday, 14 November 2019

ಬಂದೆವಯ್ಯ ಶ್ರೀ ಕೃಷ್ಣಮೂರ್ತಿ ನಿನ್ನ ankita govinda

by ಗೋವಿಂದದಾಸ
ಬಂದೆವಯ್ಯ ಶ್ರೀಕೃಷ್ಣಮೂರ್ತಿ ನಿನ್ನ ಸುಂದರಚರಣಾರವಿಂದ ನೋಡುವುದಕ್ಕೆ ಬಂದೆ ಪ

ಮಂದರೋದ್ಧರ ಅರವಿಂದ ನೇತ್ರಗೆ ನಮ್ಮೊ-ಳಿಂದು ಕೃಪೆಯ ತೋರಿ ಸಲಹೋ ಸಚ್ಚಿದಾನಂದ ಅ.ಪ

ಭಾವಸಂವತ್ಸರ ಪೌಷ ಬಹುಳಮವಾಸೆಮಹಾ ದೃಢದಿ ಸಮುದ್ರವ ಸ್ನಾನಗೈದುಆ ವಡಭಾಂಡೇಶ್ವರದಿಂದ ಬಲರಾಮದೇವರ ಕಂಡು ನಾವೆರಗಿ ಕೈಮುಗಿದೀಗ ಬಂದೆ 1

ಮಧ್ವಸರೋವರವೆಂಬ ತೀರ್ಥದಿ ಮಿಂದುಶ್ರದ್ಧೆ ಭಕ್ತಿಯೊಳ್ ನಿನ್ನ ಕಂಡು ಬಲಬಂದುಬದ್ಧಾಂಜಲಿಯ ನೀಡಿ ಸ್ಮರಿಸಿ ವಂದನೆಗೈದುಉದ್ಧರಿಸೆಂದು ವರವ ಬೇಡುವದನೀಗ ಬಂದೆ 2

ಅಷ್ಟಾವಧಾನ ಸೇವೆಯೊಳು ನಿನ್ನನುಯತಿಶ್ರೇಷ್ಠರು ಪೂಜಿಸಿ ವರವ ನೀಡಿ ಕೊಟ್ಟಮಂತ್ರಾಕ್ಷತೆ ತೀರ್ಥ ಪ್ರಸಾದವ ಪಡೆದುನಮ್ಮಯ ಭವಕಷ್ಟ ನೀಗುವುದಕ್ಕೆ ಬಂದೆ 3
*******

No comments:

Post a Comment