Thursday 14 November 2019

ಬನ್ನಿಗಡ ಸುಜನರೆಲ್ಲ ಪಾವನಕಾಯ ankita prasannavenkata

by ಪ್ರಸನ್ನವೆಂಕಟದಾಸರು
ಬನ್ನಿಗಡ ಸುಜನರೆಲ್ಲ ಪಾವನಕಾಯ ಸುಜನಪ್ರಿಯಪುಣ್ಯ ಸತ್ಯನಾಥಯತಿರನ್ನನ ಪಟ್ಟಣಕಿಂದು ಪ.

ಪರಬೊಮ್ಮನೆಂಬುವ ಮನೆದೈವನಾಗಿಹಪರಸುಖವನೀವ ಮರುತದೇವನೆಂಬಾತಪರಮಪದದ ಗುರುವು ಯುಕ್ತಿಯಿಂದ ಕಾಪುರುಷರಗಲಿಸುವಂತೆ ಸತ್ಯನಾಥಪುರಪತಿಗೆ ಬೋಧಿಸುವ ಪರಮವಾರ್ತೆಯ ಕೇಳ 1

ನವಭಕುತಿರತುನದಿಂದ ನಿರ್ಮಿತ ಪ್ರಾಕಾರಕೆನವದ್ವೇಷಿಗಳು ದಾಳಿಯಿತ್ತು ಅಂಡಲೆಯಲು ದಾನವಾರಿಯ ನಾಮಾಯುಧವ ಸತ್ಯಾಭಿನವÀÀ ತೀರ್ಥರೆಂಬೊ ಪುತ್ರಗೆ ನೀಡುತಮಾನವ ಹರಿಯೆಂಬಸುರರ ಮಡುಹಿಸುವುದು ನೋಡ 2

ಕಾಯಜಚೋರನೆಂಬವ ತಾ ಕಳ್ಳ ಹನ್ನೊಂದರ ಕೂಡಿಕಾಯವೆಂಬ ರಾಜಗೃಹಕೆ ಕನ್ನವಿಕ್ಕುವುದ ಕಂಡುಕಾಯುವ ಜ್ಞಾನೆಂಬ ಭಟನು ಅಟ್ಟಲವನಕೈದು ಚಾಪವ ಸೆಳೆದು ಮಿಕ್ಕು ಚೋರನೀಕಾಯಕಟ್ಟಿಸುವಂಥ ಕರುಣಿಗೆ ನಮಿಸುವ3

ಹರಿದಾಸರೆನಿಸುವ ಹಲವು ದೊರೆಗಳುಂಟುಹರದಾರಿಕ್ಕೆಲದಿ ಪಣ್ಯವ ಮಾಡಿ ಸುಧೆüವೀರಿಹರಿತತ್ವ ನಾಣ್ಯದೊಳು ರಾಮನಾಮದಹಿರಿದುಮುದ್ರೆಯನೊರೆದು ಪರಂಪರಹರುಷ ವ್ಯವಸಾಯವುಂಟು ಹಿರಿಯಾಮೃತವುಣ್ಣ 4

ಅಭಿನವ ಚಂದ್ರಿಕೆದೋರಿ ಅಭಿಜ್ಞಾನತೆ ಮೆರೆದಅಭೀತ ಮಂಗಳಗಾತ್ರ ಅಮಿತ ಬುಧರಮಿತ್ರಅಭಿಜÕಗುರು ಸತ್ಯನಿಧಿಯ ಸುತ ಸತ್ಯನಾಥಅಭು ಪ್ರಸನ್ವೆಂಕಟೇಶನ ಭಜಕನ ಕವಿತಅಬುಜ ಪರಿಮಳಮಂದಾನಿಲವಿಡಿವಳಿಯಂತೆ 5
*******

No comments:

Post a Comment