Thursday, 5 August 2021

ದಯಾನಿಧೆ ದಯ ಮಾಡಬೇಕು ದಯ ಮಾಡಬೇಕು ankita gurupranesha vittala

 ..by ಗುರುಪ್ರಾಣೇಶ ವಿಠಲ

ರಾಗ - : ತಾಳ -


ದಯಾನಿಧೆ ದಯ ಮಾಡಬೇಕು l

ದಯ ಮಾಡಬೇಕು ಎನ್ನಯ ದೋಷಾವೆಣಿಸದೆ l

ಹಯಮುಖ ಲೋಕಾತ್ರಯವ್ಯಾಪ್ತ ಪರಮಾಪ್ತ ll ಪ ll


ನಿನ್ನ ನಂಬಿದ ಭಕುತರನ್ನ ಚೆನ್ನಾಗಿ ಕಾಯ್ದಾ l

ಘನ್ನಾ ಕೀರುತಿ ಕೇಳಿ ಮನ್ನಾದಿ ನಮಿಸುವೆ l

ಬನ್ನ ಬಡಿಸದೆ ಸಂಪನ್ನ ಗುಣಾರ್ಣವ ll ೧ ll


ಮಾನಿ ಮಾನದನೇ ದ್ರೌಪದಿ ಅಭಿಮಾನ ರಕ್ಷಕನೇ l

ಭಾನುಜನಕ ಮುಖ್ಯಪ್ರಾಣ ವಂದಿತಾಂಘ್ರಿ l

ನೀನೊಲಿಯದಿರೆ ಸುಜ್ಞಾನ ಮಾರ್ಗವ ಕಾಣೆ ll ೨ ll


ಹರಿಕೋಟಿ ತೇಜಾ ಕಾಮಿತ ಕಲ್ಪತರು ಮಹರಾಜಾ l

ಸುರನದಿಜನಕ ಅಸುರ ಶೀಕ್ಷ  ಕಮಲಾಕ್ಷ l

ಕರುಣಿ ಕಪಿಲ ವ್ಯಾಸಾ ಗುರುಪ್ರಾಣೇಶವಿಟ್ಠಲಾ ll ೩ ll

***


ದಯಾನಿಧೆ ದಯ ಮಾಡಬೇಕು ದಯ ಮಾಡಬೇಕು ಎನ್ನಯ ದೋಷಾವೆಣಿಸದೆ |ಹಯಮುಖ ಲೋಕಾತ್ರಯ ವ್ಯಾಪ್ತ ಪರಮಾಪ್ತ ಪ


ನಿನ್ನ ನಂಬಿದ ಭುಕುತರನ್ನ ಚೆನ್ನಾಗಿ ಕಾಯ್ದಾ |ಘನ್ನಾ ಕೀರುತಿ ಕೇಳಿ ಮನ್ನಾದಿ ನಮಿಸುವೆ ಬನ್ನಾ ಬಡಿಸದೆ ಸಂಪನ್ನ ಗುಣಾರ್ಣವ 1

ಮಾನಿ ಮಾನದನೇ ದ್ರೌಪದಿ ಅಭಿಮಾನ ರಕ್ಷಕನೆ |ಭಾನು ಜನಕ ಮುಖ್ಯಪ್ರಾಣ ವಂದಿತಾಂಘ್ರಿ |ನೀನೊಲಿಯದಿರೆ ಸುe್ಞÁನ ಮಾರ್ಗವ ಕಾಣೆ 2

ಹರಿಕೋಟಿ ತೇಜಾ ಕಾಮಿತ ಕಲ್ಪಿತರು ಮಹರಾಜಾ |ಸುರ ನದಿ ಜನಕ ಅಸುರ ಶೀಕ್ಷಾ ಕಮಲಾಕ್ಷ |ಕರುಣಿ ಕಪಿಲ ವ್ಯಾಸಾ ಗುರು ಪ್ರಾಣೇಶ ವಿಠಲಾ 3

***


No comments:

Post a Comment