Wednesday, 1 September 2021

ಮಂಗಳೆಂದು ಪಾಡಿಕೆ ಶ್ರೀರಂಗನಿಗೀಗ ಭೃಂಗಾಲಕಿಯರು ಕೂಡಿ ಶೃಂಗಾರದಿ ಬೇಗ ankita shyamasundara

 ..

ಮಂಗಳೆಂದು ಪಾಡಿಕೆ ಶ್ರೀರಂಗನಿಗೀಗ

ಭೃಂಗಾಲಕಿಯರು ಕೂಡಿ ಶೃಂಗಾರದಿ ಬೇಗ ಪ


ದೇವಾಧಿದೇವ ಹರಿಗೆ ದೇವೌಷ ವಂದ್ಯಗೆ

ಗೋವರ್ಧನಾದ್ರಿಧರಗೆ ಗೋವೃಂದ ಪಾಲಗೆ

ಪಾವನಾಂಗ ಪಾವಿನ ಮೇಲೆ

ಪವಳಿಸಿದವಗೆ ಭೃಂಗಾಲಕಿಯರು 1


ಮೀನಾಗ ಫಾಣಿಕಿಟಗೆ ಶ್ರೀನಾರಿಸಿಂಹಗೆ

ಕ್ಷೋಣಿಯ ತೊರೆದ ದಶಾನನಾರಿಗೆ

ಧೇನುಪಾಲ ಸ್ಥಾಣು ಬಾಣ ಘೋಟಕಧ್ವಜಗೆ ಭೃಂಗಾಲಕಿಯರು 2


ಪ್ರೇಮಾಬ್ಧಿ ಪವನ ಪಿತಗೆ ಹೇಮಾಂಬಕಾರಿಗೆ |

ಸಾಮಜೇಂದ್ರ ಪ್ರಿಯಗೆ ತ್ರಿಧಾಮ ದೇವಗೆ

ಶಾಮಸುಂದರ ವಿಠಲ ಸುಧಾಮ ಸಖಗೆ ಭೃಂಗಾಲಕಿಯರು 3

***


No comments:

Post a Comment