Wednesday, 1 September 2021

ನೆನಿ ಮನವೇ ಪಾವನ ದೇವನ ಚರಿತ ಕಥನುವೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೆನಿ ಮನವೇ ಪಾವನ ದೇವನ ಚರಿತ ಕಥನುವೇ | ನಿನಗಿದ-ವನಿಲಿ ನೆಚ್ಚಿರೆ ತನುವೇ ಪ 


ಘನ ಶ್ಯಾಮನದಯ ಪಡಿಯದ ಸಾರ್ಥಕ | ಜನುಮಗಳೇವದಿದು ಗುಣವೇ ಅ.ಪ 


ಸುರಲೋಕ ಮೊದಲಾದ ಸುರಪ ವಿಚ್ಛೈಸಿ | ಪರಿ ಸಾಧನ ಮಾಳ್ಪರೆ | ಸುರಭಿಯಿರಲು ವಿಡಿಸದ ಪುಳಿ ಪಾಲವ | ಕರೆಸುವೆನೆಂದು ಅರಸುವರೇ 1 

ಗುರು ಶರಣ ನಿಷ್ಠೆಯೊಂದ್ಹಿಡಿಯದೇ ಕಂಡಾ | ಧರೆಯ ದೈವಕ ತಲೆವಾಗುವರೇ | ಸುರ ತರುವಿನ ನೆರಳವನೇ ತ್ಯಜಿಸಿ | ಬ| ರ್ಬುರ ದ್ರುಮವನು ಸಾರುವೇ 2 

ವಿಕಳಿತ ಮಾಡುವ ತಾಪತ್ರಯದಾ | ಸಕಲ ಹಳಾಹಳ ತ್ಯಜಿಸೀ ಅಖಿಳ ಜೀವನದೊಡಿಯನ ಸದ್ಮೂರ್ತಿಯ | ಹೃತ್ಕಮಲದೊಳಗಿರಿಸೀ 3 

ಹರಿಮಹಿಮೆಯ ಕೊಂಡಾಡುತ ಪೊಗಳುತ | ಬೀರುತ ಗುರು ಭಕುತರಿಗೇ | ಪರಮ ಸದ್ಭಾವದ ಭಕುತಿಲಿ ಮುಣುಗೈನ | ವರತ ಪ್ರೇಮಾರ್ಣವದೊಳಗೇ 4 

ನಯನದಿಂದಲೀ ಸ್ಮರಿಸುವ ಬಹು ಶರಣರ | ಭಯವ ನಿವಾರಣ ಮಾಡುವ | ದಯದಲಿ ಮಹಿಪತಿ ನಂದನ ಪಾಲಿಸು | ತಿಹಕರುಣಾಕರ ಮಾಧವಾ 5

****


No comments:

Post a Comment