Wednesday, 1 September 2021

ಯಾತಕೆ ಮರೆತೆನ್ನ ಯತಿಕುಲ ತಿಲಕನೆ ankita krishnavittala

 ರಾಗ: [ರಂಜಿನಿ] ತಾಳ: [ಆದಿ]


ಯಾತಕೆ ಮರೆತೆನ್ನ ಯತಿಕುಲ ತಿಲಕನೆ

ಪ್ರೀತಿಯ ಬಯಸುತ ಬಂದೆ ಪ


ವಾತಸುತಗತಿಪ್ರಿಯದೂತನೆ ನಾಥನೀನೆಂತೆಂದು ನಂಬಿದೆ

ವಾತಪಿತನಡಿ ಮತಿಯ ಪ್ರೇರಿಸೋ 

ಖ್ಯಾತಗುರು ಶ್ರೀ ರಾಘವೇಂದ್ರನೆ ಅ.ಪ.


ದೇಶದೇಶದಿ ಬರುವ ದಾಸಜನರÀಘ

ನಾಶಗೈಸಿ ಪೊರೆವೊ ದಾಶರಥಿ ಕಿಂಕರಾ

ಶೇಷಶಯನನದೋಷ e್ಞÁನ ವಿಶೇಷದಿಂದಲಿ ನ್ಯಾಸಮಾಡಿದೆ

ದಾಸನೆನ್ನಯ ದೋಷ ಕಳೆಯುತ ಬೀಸು ದೃಷ್ಟಿಯ ಭೂಸುರೋತ್ತಮ 1

ಛಲದಿ ಭಕ್ತಿಯ ಮಾಡಿ ಒಲಿಸಿ ಹರಿಯ ಪಾದ

ಲಲಿತಕೀರ್ತಿಲಿ ಮೆರೆದೆ ಭಳಿರೆ ಭಳಿರೆ ಗುರುವೇ

ಗೊಲ್ಲಕೃಷ್ಣನ ಚೆಲ್ವ ನಾಟ್ಯದಿ ನಿಲ್ಲಿಸಿದ ನಿನಗೆಲ್ಲಿ ಸರಿಯೈ

ನಲ್ಲ ಯತಿವರ ಕಾಲಿಗೆರಗುವೆ ಶೀಲ ಭಕುತಿಯ ಪಾಲಿಸೀಗಲೆ 2

ವ್ಯಾಸಮುನಿಯು ಎನಿಸಿ ಶ್ವಾಸಮತವ ಮೆರೆಸಿ

ದೋಷ ಹರಿಸಿ ಧೊರೆಗೆ ದಾಸ ದೀಕ್ಷೆಯ ತೋರ್ದೆ

ಈಶದಾಸರ ಭೇದ ವಾದವ ಆಶುಕವಿತದಿ ವಿಶದಪಡಿಸಿದೆ

ಶ್ರೀಶಶಯನನಾವೇಶ ಸಂಯುತ ಭೇಶಕಾಂತಿ ವಿಶಾಲಕರುಣಿಯೆ 3

ದಾತ ಈತನೆಂಬ ಖ್ಯಾತಿ ಬಿರುದು ನಿನಗೆ

ಪ್ರೀತಿಯಿಲ್ಲವೇ ಗುರುವೇ ಜೋತು ಬಂದೆ ಅಡಿಗೇ

ನಾಥ ಜಯಮುನಿ ಪ್ರೀತಿಯ ಪಡೆಯುತ ಗೀತೆ ಬೋಧೆಯ ನೀತಿ ಪೇಳಿದೆ

ಏತಕೀತಡ ಮಾತಲಾಲಿಸು ದೂತನಿನ್ನವ ಪೂತಕಾಯನೆ 4

ಪರಮ ಭಕ್ತರ ವೃಂದ ನಿರುತ ನಮಿಪ ಚೆಂದ

ಅರಿಯೆ ವರ್ಣನೆ ಎಂದ ಸುರಿಸು ಭಕ್ತಿಯ ಗಂಧ

ಚಾರು ಮಂಗಳಚರಿತ ನರಹರಿ ಭಾರಿಸೇವಿಪ ಸೂರಿ ಶೇಖರ 

ಬೀರಿಕರುಣವ ಭಾರತೀಶನ ಸಾರಶಾಸ್ತ್ರದಿ ತೋರು ತತ್ವಾರ್ಥ 5

ಲೋಕ ಹರಕೆ ನೀಡಿ ಸಾಕಿ ಸಲಹೆ ಹೆಜ್ಜೆ

ನೂಕಿ ದುರಿತರಾಶಿ ಸಾಕುಹರಿಯ ತೋರಿ

ಶ್ರೀಕರಾರ್ಚಿತ ಪಾದಪಲ್ಲವ ಪಾಕನಾಶನ ಏಕ ವೀರನ

ಏಕಮನಸಿಲಿ ಧ್ಯಾನಿಪ ಧೊರೆ ನಾಕ ಋಷಿಗತಿಪ್ರಿಯ ಶಿಷ್ಯನೆ 6

ಪಾಹಿ e್ಞÁನದ ಖಣಿಯೆ ಪಾಹಿ ಭಕ್ತರ ನಿಧಿಯೆ

ಪಾಹಿ ಮತಿಮತಸ್ತಂಭ ಪಾಹಿ ಶ್ರೀ ಹರಿಯ ದೂತ

ಪಾಹಿಸುಗುಣೋದಾರ ಮಹಿಮನೆ ಪಾಹಿನತಜನ ಭಾರವಹಿಪನೆ

ಪಾಹಿಜಯಮುನಿ ವಾಯುವಂತರ ಗೇಹ ಸಿರಿಕೃಷ್ಣವಿಠಲ ಭಜಕ 7

***


No comments:

Post a Comment