ದಾಸನಾಗಬೇಕು ಕ್ಲೇಶಪಂಚಕವಳಿದು |
ಆಸೆಯಲ್ಲಿ ಮನ ಸೂಸದೆ ಸರ್ವದಾ
ಮನದ ಕಲ್ಮಷ ಕಳೆದು –
ಮಹಾದೇ-ವನ ಮಹಿಮೆಯ ತಿಳಿದು
ಇನಿತು ಈ ಜಗವೆಲ್ಲ ಈಶ್ವರಮಯವೆಂದು
ಘನವಾದ ಮೋಹದ ಗಡಿಯನು ದಾಟುತ ||1||
ತನುವು ಅಸ್ಥಿರವೆನುತ –
ತಿಳಿದು ಶಂಕರನ ಹೃದಯವ ಕಾಣುತಘನವಾದ
ಇಂದ್ರಜಾಲವ ಮಾಯೆಯೆನುತಬಿನುಗು
ಸಂಸಾರದ ಮಮತೆಯ ಬಿಡುತ ||2||
ಆರು ಚಕ್ರದಿ ಮೆರೆವ –
ಅಖಂಡನಮೂರು ಗುಣವ ತಿಳಿದು
ಆರು ಮೂರು ಹದಿನಾರು ತತ್ತ್ವವ ಮೀರಿತೋರುವ ಕಾಗಿನೆಲೆಯಾದಿಕೇಶವನಡಿ ||3||
*********
No comments:
Post a Comment