Tuesday, 15 October 2019

ಆರಿಗಾದರು ಪೂರ್ವಕಲ್ಪನೆ ತಪ್ಪದು ankit neleyadikeshava

ಕನಕದಾಸ
ಆರಿಗಾದರು ಪೂರ್ವಕಲ್ಪನೆ ತಪ್ಪದು ಪ

ಬೇರೆ ಬಯಸಿದರೆ ಬರಲರಿಯದಯ್ಯ 
ಅರಾಮಚಂದ್ರನ ಸೇವೆ ಮಾಡಿ ಮೆಚ್ಚಿಸಿ 
ಮಹಾತಾಮಸನ ಗರ್ವವನು ಮುರಿದು 
ಬಂದರೋಮಕೋಟಿ ಲಿಂಗನೆನಿಸಿದ 
ಹುನುಮನಿಗೆ ಹೊರಗೆಗ್ರಾಮಗಳ 
ಕಾಯ್ದುಕೊಂಡಿಹುದೆ ಮನೆಯಾಯ್ತು1

ಸುರಪತಿಯ ಗೆದ್ದು ಸುಧೆಯನು ತಂದು 
ಮಾತೆಯಸೆರೆಯ ಪರಿಹರಿಸಿ ಬಹು 
ಭಕ್ತನೆನಿಸಿಹರಿಗೆ ವಾಹನನಾಗಿ ಹದಿನಾಲ್ಕು 
ಲೋಕವನುಚರಿಸಿದ ಗರುಡನಿಗೆ ಮನೆ 
ಮರದ ಮೇಲಾಯ್ತು2

ಪೊಡವಿ ಭಾರವ ಪೊತ್ತು ಮೃಡಗೆ 
ಭೂಷಣನಾಗಿಹೆಡೆಯೊಳಗೆ ಮಾಣಿಕ್ಯವಿಟ್ಟುಕೊಂಡು
ಬಿಡದೆ ಶ್ರೀಹರಿಗೆ ಹಾಸಿಗೆಯಾದ ಫಣಿಪತಿಗೆ
ಅಡವಿಯೊಳಗಣ ಹುತ್ತು ಮನೆಯಾಯಿತಯ್ಯ3

ಮೂರು ಲೋಕದ ಒಡೆಯ ಮುಕ್ಕಣ್ಣನೆಂಬಾತ
ಸಾರುತಿದೆ ಸಟೆಯಲ್ಲ ವೇದವಾಕ್ಯಪಾರ್ವತೀ 
ಪತಿಯಾದ ಕೈಲಾಸದೊಡೆಯನಿಗೆಊರ ಹೊರಗಣ 
ಮಸಣ ಮನೆಯಾಯಿತಯ್ಯ4

ಮೀರಲಳವಲ್ಲವೋ ಮುನ್ನ ಮಾಡಿದ್ದುದನುಯಾರು ಪರಿಹರಿಸಿಕೊಂಬವರಿಲ್ಲವೊಮಾರಪಿತ ಕಾಗಿನೆಲೆಯಾದಿಕೇಶವರಾಯಕಾರಣಕೆಕರ್ತ
ನೀ ಕಡೆ ಹಾಯಿಸಯ್ಯ5
*******

No comments:

Post a Comment