Sunday, 1 August 2021

ಹೇಮಾವತೀ ತೀರ ನಿಲಯಾ ನಮೋ ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ ankita vaikunta vittala


kruti by ಬೇಲೂರು ವೈಕುಂಠ ದಾಸರು belur vaikunta dasaru

 ಗೊರೂರು


ಹೇಮಾವತೀ ತೀರ ನಿಲಯಾ ನಮೋ

ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ ಪ


ಅರಸು ಮುನಿವಾಗ ಆತ್ಮರು ಮೊಗವ ತೆಗೆವಾಗ

ದುರುಳ ಮಾನವರಿಟ್ಟೆಡೆಯಲಿರುವೆಂಬಾಗ

ತರುಣಿಯರೊಲವು ಪೈಸರಿಸುವಾಗ ಸುರರು ಮ

ತ್ಸರಿಪಾಗ ನರಸಿಂಹ ಶರಣೆನ್ನು ಮನವೇ 1


ಮುಗಿಲಗಲದಾಪತ್ತು ಕವಿವಾಗ ಕ್ರೂರಗೃಹ

ಪಗೆಗಳಿಟ್ಟುಣಿಪಾಗ ಅನಲ ಜಲಭಯದಿ

ಮಿಗೆ ಮುಳುಗುವಾಗ ರೋಗಗಳು ಪೀಡಿಸುವಾಗ

ಮೃಗರಾಜವದನ ಶರಣೆನ್ನು ಬಿಡದೆ ಮನವೇ 2


ಸುಖವ ಪಡುವಾಗ ದು:ಖಕ್ಕೆ ಮನವ ತೆಗೆವಾಗ

ಅಖಿಲ ಪಾತಕದ ನೆರೆಕಾಲಲೊದೆವಾಗ

ಮಖಮಥನ ಕಮಲಭವಮುಖ ದಿವಿಜವಂದ್ಯಪದ

ನಖನೆ ಶ್ರೀ ವೈಕುಂಠಪತಿ ಚನ್ನರಾಯ[ನೆನುಮನವೆ] 3

***




No comments:

Post a Comment