Monday, 2 August 2021

ಹಿತದಿ ಜೀವಿಸು ಬಾಲೆ ಸುಮಂಗಲೆ ankita karpara narahari

ಹಿತದಿ ಜೀವಿಸು ಬಾಲೆ ಸುಮಂಗಲೆ

ಹಿತದಿ ಜೀವಿಸು ಬಾಲೆ ಪತಿಯ ಪ


ಸೇವಾನುಕೂಲೆ ಕ್ಷಿತಿಯೊಳಗೆ

ಪತಿವ್ರತಾ ಧರ್ಮನಿರತಳೆನಿಸಿ ಬಹುಸುತರ ಪಡೆದು ಅ.ಪ


ರತಿಪತಿಪಿತನಿಗೆ ಪ್ರತಿಮೆಗಳೆನಿಸುವ

ಅತಿಥಿಗಳ ಸಂತತ ಸುಶೇವಾ-

ರತಳು ಬಹು ಗುಣವತಿಯಳೆನಿಸುವ 1


ಗುರುಜನರಿಗೆ ಸದಾ ಶಿರಬಾಗಿ ನಡೆಯುತ

ಹರುಷದಲಿ ಹರನರಸಿಯಳ ಪದ

ಸರಸಿಜದಿ ಮನವಿರಿಸಿ ಪೂಜಿಸಿ 2


ಶರಣು ಜನಕೆ ಸುರತರುವೆನಿಪ ಕಾರ್ಪರ

ಸಿರಿಮನೋಹರ ನರಹರಿಯ ಶುಭ

ಚರಣಯುಗಲವ ಸ್ಮರಿಸುತನುದಿನ 3

****


No comments:

Post a Comment