Wednesday, 1 September 2021

ಜ್ಞಾನವಿಲ್ಲದೆ ಬಾಳೂದೊಂದು ಸಾಧನವೆ ಗಾಣದೆತ್ತಿನಂತೆ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಜ್ಞಾನವಿಲ್ಲದೆ ಬಾಳೂದೊಂದು ಸಾಧನವೆ ಗಾಣದೆತ್ತಿನಂತೆ ಕಾಣದಿಹ್ಯದೊಂದು ಗುಣವೆ ಪ 


ತನ್ನ ನÀರಿಯಲಿಲ್ಲ ಬನ್ನವಳಿಯಲಿಲ್ಲ ಕಣ್ಣದೆರೆದು ಖೂನಗಾಣಲಿಲ್ಲ ಸಣ್ಣದೊಡ್ಡರೋಳೆನೆಂದು ತಿಳಿಯಲಿಲ್ಲ ಬಣ್ಣ ಬಣ್ಣದ ಶ್ರಮ ಬಿಡುವದುಚಿತವಲ್ಲ 1 

ಶಮದಮಗೊಳ್ಳಲಿಲ್ಲ ಕ್ಷಮೆಯು ಪಡೆಯಲಿಲ್ಲ ಸಮದೃಷ್ಟಿಯಲಿ ಜನವರಿಯಲಿಲ್ಲ ಸಮರಸವಾಗಿ ಸದ್ಛನವ ನೋಡಲಿಲ್ಲ ಭ್ರಮೆ ಅಳಿದು ಸದ್ಗುರುಪಾದಕೆರಗಲಿಲ್ಲ2 

ಗುರು ಕೃಪೆ ಇಲ್ಲದೆ ಗುರುತಾಗುವದಲ್ಲ ಗುರುತಿಟ್ಟು ನೋಡಿಕೊಂಡವನೇ ಬಲ್ಲ ಗುರು ಭಾನುಕೋಟಿ ತೇಜನಂಘ್ರಿ ಕಂಡವನೆಬಲ್ಲ ತರಳ ಮಹಿಪತಿ ಸ್ವಾಮಿ ಸುಖ ಸೋರ್ಯಾಡುವದೆಲ್ಲ 3

****

 

No comments:

Post a Comment