Wednesday, 1 September 2021

ಸಾವಧನಾಗಿ ಮನುಜಾ ಕೇಳು ನಿಜ ಸ್ಥಿತಿಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸಾವಧನಾಗಿ ಮನುಜಾ | ಕೇಳು | ನಿಜ ಸ್ಥಿತಿಯಾ ಪ 


ಕೇಳು ನಿಜ ಸ್ಥಿತಿಯಾ | ಪಡೆದೇನೆಂದರೆ ಗತಿಯಾ | ಬೀಳದೆ ನೀ ಕವಳದಾರಿಗೆ | ನಂಬು ಗುರು ಮೂರ್ತಿಯಾ 1 

ಗಗನ ಮುರಿದು ಬೀಳಲಿ | ಸಾಗರ ಮೇರೆದಪ್ಪಲಿ | ಬಾಗದೇ ನೀ ಅನ್ಯದೈವಕ | ಭಾವ ದೃಢ ವಿರಲಿ 2 

ದಾಸರ ಕಂಡರೆ ರಂಗಯ್ಯಾ | ಜಂಗಮ ಕಂಡರೆ ಲಿಂಗಯ್ಯಾ | ವೇಷಿಯಂತೆ ತಿರುಗಬ್ಯಾಡಾ | ಹಿಡಿಯೋ ಒಂದೇ ನಿಷ್ಠೆಯಾ 3 

ಕಂಡ ಮಾರ್ಗ ನೋಡದೆ | ಕಂಡ ಮಾತನಾಡದೆ | ಗಂಡನೊಬ್ಬನ ಮಾಡದೆ ನಾರಿ | ಪತಿವೃತೆ ಮೆರಿವದೇ 4 

ಎಲ್ಲಿ ಒಂದೇ ನಿಷ್ಠೆಯು | ಅಲ್ಲಿ ಶ್ರೀ ಹರಿ ಕೃಪೆಯು | ನಿಲ್ಲದೆ ಮಹಿಪತಿ ನಂದನಸ್ವಾಮಿ | ಇದಿರಿಡುವನು ಸಂಗತಿಯಾ 5

***


No comments:

Post a Comment