..
Kruti by ಶಿವರಾಮರು Shivaramaru
ಮಾಯದ ಮಾತೆಲ್ಲ | ಸುಳ್ಳದೆ | ಖರೆಯಾಗಿ ನಿಂತದೆ ಪ
ಗಂಧರ್ವಪುರದಿಂದ | ನೋಡಮ್ಮಾ | ಬಂಜೆಯ ಮಗತಾ ಬಂದು | ಭೀಷ್ಮನ ಮಗಳಿಗೆ | ಮದುವ್ಯಾದ 1
ಸೊಂಟನ ಕೈಯಿಂದ | ನೋಡಮ್ಮಾ | ಗಗನ ಪುಷ್ಪವ ತರಿಸಿ |ಕೊರಳೊಳು | ಮಾಲೆಯ ಹಾಕಿದರಂತೆ 2
ಪರ್ವತ ಕೊನೆ ಮೇಲೆ | ನೋಡಮ್ಮಾ | ಮೃಗಜಲ ನದಿಯಂತೆ |ಅದರೊಳು | ಕಲ್ಲಿನ ಹರಗೋಲಂತೆ 3
ಮೊಲವೆದ್ದು ಇರಿಯಲ್ಕೆ | ನೋಡಮ್ಮ | ಹರಗೋಲನ ಹರಿದು | ಒಳಗಿದ್ದ ಬಂಜಿಯ ಮಗ ಹರಿದ್ಹೋದಾ 4
ಮೀನುಗಳಿಷ್ಟೂ ಕಂಡೂ | ನೋಡಮ್ಮ | ಶವ ತೆಗೆದು ಹೊರಗ್ಹಾಕಿ | ವನಕೊಯ್ದು | ದಹನವ ಮಾಡಿದವಂತೆ 5
ಇಷ್ಟು ಕುರುಡಾ ಕಂಡಾ | ನೋಡಮ್ಮಾ | ಹೆಳವಾ ಹೇಳಲಿ ಬಂದಾ | ಕಿವುಡನಿಗೆ | ಮೂಕ ಹೇಳಿದನಂತೆ 6
ಈ ಪರಿ ಸಂಸಾರ ನೋಡಮ್ಮಾ | ಮಾಯದ ವಿಸ್ತಾರ | ಶಿವರಾಮಾ ತಾ | ಕೇಳಿ ಬೆರಗಾದಾ 7
***
No comments:
Post a Comment