..
ಬಿನ್ನಹಕೆ ಬಾಯಿಲ್ಲ ಭೂತನಾಥ ಪ
ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು ಅ.ಪ.
ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿ
ಧೇನು ವತ್ಸನ ತೆರದಿ ಪಾಲಿಸೆನ್ನ
ವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿ
ನಾನು ನನ್ನದು ಬಿಡದು ಎನಗಾವ ಗತಿಯಿನ್ನು 1
ನೀಲಕಂಠನೆ ನಿನ್ನ ನೀಳಪಾದದ ಧೂಳಿ
ಮೂರ್ಲೋಕದಘತೂಲಕಗ್ನಿ ಸತತ
ಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬ
ಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು 2
ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿ
ಉಣಿಸುವುವು ಮಹದುಃಖ ಎನ್ನ ಮೀರಿ
ಮನೋ ಹೃದಯದಲಿ ದೋಷ ತುಂಬಿ ತುಳುಕುವುದಯ್ಯ
ಎನಿತು ನಿನ್ನಲಿ ನಿಂದು ಪೊರೆಯೆಂದು ಮೊರೆ ಇಡಲಿ 3
ದುಷ್ಟವಾಸನೆ ಶಕ್ತಿ ಮೆಟ್ಟಿ ಆಳುವುದೆನ್ನ
ವೃಷ್ಟೀಶನಲಿ ಎನ್ನ ಪೋಗಬಿಡದೊ
ದುಷ್ಟನಕ್ರಗೆ ಸಿಕ್ಕ ಕರಿಯಂತೆ ಬಾಯ್ಬಿಡುವೆ
ಕಷ್ಟ ಪರಿಹರಿಸಯ್ಯ ಹರಿನಿಷ್ಠಧ್ಯಾನವನಿತ್ತು 4
ಶತಕೋಟಿ ಶ್ರುತಿಯಲಿ ಜಯೇಶವಿಠಲ
ನತಬಂಧು ಎಂತೆಂದು ಸಾರುತಿಹುದು
ಹಿತಭಕ್ತ ನೀ ಹರಿಗೆ ಹರಿಮೀರ ನಿನ್ನುಕ್ತಿ
ಪತಿತಪಾವನ ನನ್ನ ಹರಿಭಕ್ತನ ಮಾಡು5
***
No comments:
Post a Comment