Thursday, 5 August 2021

ಪ್ರಸನ್ನವಿಠಲ ಪಾಲಿಸಿವನ ಅಸತ್ಯದಲಿ ಮನವಿಡದೆ ಆಸಕ್ತಿ ankita jayesha vittala

 ..

ಪ್ರಸನ್ನವಿಠಲ ಪಾಲಿಸಿವನ ಪ


ಅಸತ್ಯದಲಿ ಮನವಿಡದೆ ಆಸಕ್ತಿ ನಿನ್ನಲ್ಲಿ ಕೊಟ್ಟು ಅ.ಪ.


ದೃಢÀ ನಿನ್ನ ಭಕ್ತರಲಿ ಕೊಡುಭಕ್ತಿ ವಿರಕ್ತಿ

ದೃಢ e್ಞÁನ ನಿನ್ನಲ್ಲಿ ಬಿಡದೆ ನಿತ್ಯ

ಮಡದಿ ಮಕ್ಕಳ ಕೂಡಿ ನಿನ್ನ ಸೇವೆ ಸಲ್ಲಿಸಲಯ್ಯ

ಕಡಲಸುತೆ ಶ್ರೀ ರಮಣ ಬೆಂಬಲನು ನೀನಾಗು 1


ಸಜ್ಜನರ ಪದಧೂಳಿ ಆಗಿರಲಿ ಎಂದೆಂದು

ದುರ್ಜನರ ಸಹವಾಸ ಕೊಡಬೇಡವಯ್ಯ

ಬೊಜ್ಜೆಯಲಿ ಮೂರ್ಜಗವ ಪೊತ್ತ ಮಹಾತ್ಮ ಇವನ

ಹೆಚ್ಚಾಗಿ ಪೊರಿ ಬಿಡದೆ ಅಚ್ಚ ಮಾರ್ಗದಿ ಇಟ್ಟು 2


ನಿನ್ನ ನಾಮಾಮೃತ ಸತತ ಸುಖ ಸವಿಯಲಿ ಸ್ವಾಮಿ

ಬನ್ನ ಬಡಿಸಲಿ ಬೇಡ ತರಳನಿವನು

ಉನ್ನತೋನ್ನತ ಮಹಿಮ ಜಯೇಶವಿಠಲ

ಮನ್ನಿಧಿ ನೀನೆಂದು ಪ್ರಾರ್ಥಿಸುವೆ ಕೈಪಿಡಿದು 3

***


No comments:

Post a Comment