Wednesday, 1 September 2021

ಸಲಹು ಸಲಹು ಸಲಿಲಜನಯನಾ ಎನ್ನಾ ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಸಲಹು ಸಲಹು ಸಲಿಲಜನಯನಾ|ಎನ್ನಾ| ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ 


ಕರುಣ ನೋಟಗಳಿಂದಲಿ ನೋಡಿ|ಸರ್ವ| ಭಾರ ಒಪ್ಪಿಸಿಕೊಂಡು ನಿಜ ನೀಡಿ| ದಾರಿದೋರುವ ಸುಮತಿಯ ನಿಲಿಸಿ|ಅತಿ| ತರಳನೆನುತ ಭಯವನೆ ಹರಿಸಿ 1 

ಹರಿದುರಿತದ ಬಂಧನ ಬಲಿಯಾ|ತವ| ಚರಣದ ಭಕುತಿ ಕೊಡಲಿ ದೊರಿಯಾ| ಹರಿಗುಡದರಸನ ದಶಮುಖದಾ ಸಂಗ| ಲಿರಿಸು ದಾಸರ ಸಗಟವನೊದೆದಾ2 

ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ| ವಿಪುಳ ವಾಜಿಯೊಳಿರಿಸು ಧೃಡದಿ ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ| ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ3

***

No comments:

Post a Comment