Wednesday, 1 September 2021

ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಸುಲಭನೆಂದಾಡುವರು ಹರಿದಾಸರೆಲ್ಲ ankita gadugina veeranarayana

 ..

kruti by ವೀರನಾರಾಯಣ Veeranarayana 


ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಪ


ಸುಲಭನೆಂದಾಡುವರು ಹರಿದಾಸರೆಲ್ಲ ಅ.ಪ.


ದರುಶನವು ಸಿಗಲೆಂದು ಪಂಢರಿಗೆ ನಾ ಬಂದೆಪರಮಪಾವನ ನಿನ್ನ ಮೂರುತಿಯ ಮುಂದೆತ್ವರದಿನಿಲೆ ಬರಲು ಬಹುಭಕ್ತಿಯಿಂದೆತೆರೆಯಲಿಲ್ಲವೊ ದ್ವಾರ ಏನೆಂದೆ ತಂದೆ 1


ಶಿಲೆಯ ಪ್ರತಿಮೆಯನೀಗ ತೋರದವ ನೀ ಮುಂದೆಬಲು ನಿಜದ ರೂಪವನು ತೋರುವುದು ಹೇಗೆಂದೆಜಲಜಾಕ್ಷ ಭರವಸೆಯ ನೀಡಲೆಂತು ಮನ ಗುಂದೆಸಲಹು ವಿಠ್ಠಲರಾಯ ಕೈ ಮುಗಿಯುವೆನು ತಂದೆ 2


ಸುಲಭದೊಳು ಸುಲಭನೈ ಪಂಢರಿಯ ವಿಠಲಾಬಲು ಪಾಪಿಗಳನು ಉದ್ಧರಿಪ ಸಕಲಬಲುಹಿ ನೀ ನುಡಿಯು ನನಗೆಲಾಸುಲಭ ಗದುಗಿನ ವೀರನಾರಾಯಣನು ಅಚಲ 3

***


No comments:

Post a Comment