Wednesday, 1 September 2021

ಸಿಕ್ಕಸಿಕ್ಕ ಇಲ್ಲೇ ಸಿಕ್ಕ ಪಕ್ಕದೊಳೆಲ್ಲೆಲ್ಲ್ಯೂ ಹರಿ ತುಂಬಿಹನಕ್ಕ ankita gadugina veeranarayana

..

kruti by ವೀರನಾರಾಯಣ Veeranarayana 


ಸಿಕ್ಕ ಸಿಕ್ಕ ಇಲ್ಲೇ ಸಿಕ್ಕ ಪ


ಪಕ್ಕದೊಳೆಲ್ಲೆಲ್ಲ್ಯೂ ಹರಿ ತುಂಬಿಹನಕ್ಕ ಅ.ಪ.


ಅಡಗಲು ಎಲ್ಲೆಲ್ಲ್ಯೂ ಸ್ಥಳವಿಲ್ಲವಕ್ಕಜಡ ಜೀವಗಳೊಳು ತೋರುವನಕ್ಕ 1


ಸಕಲರಿಗಿವನು ಕಾಣನು ತಕ್ಕಭಕುತರಿಗಷ್ಟೇ ಕಾಣುವನಕ್ಕ 2


ಶಕ್ತಿಯುಕ್ತಿಯಿಂದರಸಲು ಸಿಗನಕ್ಕಭಕ್ತಿಯೊಳರಸಲು ಇಲ್ಲೇ ಸಿಗುವನಕ್ಕ 3


ಇಲ್ಲೆ ಗದುಗಿನಲ್ಲೆ ನಿಂದಿಹನಕ್ಕಬಲ್ಲ ವೀರನಾರಾಯಣನಕ್ಕ 4

***

 

No comments:

Post a Comment