ಕಾಖಂಡಕಿ ಶ್ರೀ ಕೃಷ್ಣದಾಸರು
ಬಾಧಕರೊಳು ಬದ್ಧನು | ಮಧುಸೂದನ ಭಕ್ತಿಗೆ ದೃಢವಿಲ್ಲದವನು ಪ
ಧರೆಯೊಳು ನೋಡಲು ಕೊಳಲುಂಟು ಕೊಡಲುಂಟು | ಹರಿಪರದೈವೆಂದು ಹೇಳುವನು | ದುರಿತವು ಬಂದಡೆ ನೀಚದೈವಂಗಳಿ | ಗೆರಗಿ ಕೊಂಡಾಡುವ ಸಂದೇಹಿ ಆತ್ಮಾ 1
ನಾನಾ ಶಾಸ್ತ್ರವನೋದಿ ಕಾಂಚನದಾಶೆಗೆ | ನೃಪರ ವಾಲ್ಗೈಸುವನು | ಈ ನಿಖಿಳದ ವೃತ ಜಪ ತಪವನು ಮಾಡೀ | ನಾನೆಂಬ ಹಮ್ಮಿಲಿ ಪರರನು ಹಳಿವಾ 2
ವಾಸುದೇವ ಸರ್ವಯಂಬುವ ದೇವರ | ದಾಸರ-ಸೂಯದಿ ಬಾಳುವನು | ಲೇಸಾಗಿ ಗುರುವರ ಮಹಿಪತಿಸ್ವಾಮಿಯ | ಧ್ಯಾಸವಿಲ್ಲದೆ ವಣಡಂಬದಲ್ಲಿಹನು 3
***
No comments:
Post a Comment