..
ಶರಣಜನರ ಕಲ್ಪತರುವೆ ನಿನ್ನ
ಕರುಣಾದಿ ಪೊರಿ ಎನ್ನ ಗುರುವೇ ಪ
ಶರಣರಿಲ್ಲದೆ ಕರುಣಿಸೆಂದು
ಶರಣು ಪೊಕ್ಕೆನೊ ಚರಣ ಕಮಲಕೆ
ಶರಣೆಂದೂ ಕರುಣದಿಂದಲಿ
ಕರುಣಿಸೆನ್ನನು ಕರುಣಸಾಗರ ಅ.ಪ
ತಾಪತ್ರಯದಿ ಬಹುಬೆಂದೇ ಭವ -
ಕೂಪಾರದೊಳಗತಿ ನೊಂದೇ
ಪಾಪಮೋಚಕ ನಿಷ್ಪಾಪಿ - ಜನರ ಪಾಲ
ಕಾಪಾಡೊ ನೀ ಎನ್ನ ಅಪಾರ ಮಹಿಮನೆ
ದ್ವಾಪರದಿ ಯದುವರನು ಸಾಂ -
ದೀಪಪುತ್ರನ ತೋರಿ ಕಾಯ್ದನು
ಭೂಪ ಬಕನಳಿದು ಸಲಹಿದ -
ನಾಪರಿಯಲಿ ಎನ್ನಸಲಹೋ 1
ಕಾಮಿತ - ಫಲದ ನೀನೆಂದೂ ಬಲು -
ಪ್ರೇಮಾದಿ ಬಳಿಗೆ ನಾ ಬಂದೂ
ಸ್ವಾಮಿ ನೀ ಗುರುಸಾರ್ವಭೌಮ ನಿನ್ನಂಘ್ರಿಯುಗ -
ತಾಮರಸವ ಮನೋ - ಧಾಮಾದಿ ನಿಲಿಸೆಂದೆ
ರಾಮ ಕೌಶಿಕÀ ಮಖವ ಕಾಯ್ದನು
ಭೀಮ ವಿಪ್ರರ ಭೀತಿ ಬಿಡಿಸಿದ
ಧೂಮಕೇತನನುಂಡು ಕೃಷ್ಣನು
ಆಮಹದ್ಭಯ ಕಳದ ತೆರದಿ 2
ತಾತ ನಿನ್ನನು ಬಾಧೆ ಬಡಿಸೇ ಶಿರಿ -
ನಾಥ ತಾ ಬಂದಾಗ ಬಿಡಿಸೆ
ದಾತ ಗುರುಜಗನ್ನಾಥ ವಿಠಲನತಿ
ಪ್ರೀತಿಯಿಂದಲಿ ನಿನ್ನ ಮಾತು ಕೇಳಿದತೆರ
ಮಾತು ಲಾಲಿಸಿ ಕಾಯೋ ಯತಿಕುಲ -
ನಾಥ ಎನ್ನಪರಾಧ ನೋಡದೆ
ಭೀತಿಯನು ಸದೆದು ಪಾಲಿಸ -
ನಾಥರಕ್ಷಕನಲ್ಲೆ ಗುರುವರ 3
***
No comments:
Post a Comment