ಗೋವಿಂದ ಗೋವಿಂದ ಕೃಷ್ಣ ಹರಿ ಪ
ಗೋವಿಂದ ಮುಕುಂದ ಗೋಪಾಲಕೃಷ್ಣ ಅ.ಪ
ಕಡೆಗಣ್ಣಿಲಿಂದೊಮ್ಮೆ ನೋಡೋ ನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋ ಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ 1
ಮಕ್ಕಳಿಗೊಡೆಯ ನೀನಾಗಿ ಹಸುಮಕ್ಕಳ ಕೂಡೆ ನೀನಾಡ ಹೋಗಿಸಿಕ್ಕದೆ ಬಹು ದಿನಕಾಗಿ ದಿಂಧಿ-ಮಿಕ್ಕೆಂದು ಕುಣಿಸುವೆ ಬಾ ಚೆನ್ನಾಗಿ2
ಹೃದಯ ಕಮಲದೊಳಗೆನ್ನ ನಿನ್ನಪದಕಮಲವನೀ ದಯೆಗೈಯೊ ಮುನ್ನಚದುರಕುಣಿಯೊ ಚೆಲ್ವರನ್ನ ವಿ-ಬುಧರೊಡೆಯನೆ ನಿತ್ಯಾನಂದ ಕೃಷ್ಣ 3
***
No comments:
Post a Comment