Wednesday 1 September 2021

ತೂಗಿರೆ ಶ್ರೀ ರಂಗವಲಿದ ದಾಸಾರ್ಯರ ತೂಗಿರೆ ಜಗನ್ನಾಥರಾಯರ ankita shyamasundara jagannatha dasa stutih

 ..

ತೂಗಿರೆ ಶ್ರೀ ರಂಗವಲಿದ ದಾಸಾರ್ಯರ

ತೂಗಿರೆ ಜಗನ್ನಾಥರಾಯರ ಪ


ತೂಗಿರೆ ಭಾಗಣ್ಣ ಗುರುವರನುಗ್ರಹಪಾತ್ರ

ಭಾಗವತ್ತೋತ್ತಮರ ತೂಗಿರೆ ಅ.ಪ


ಘನ ಸುಜ್ಷಾನ ಸದ್ಭಕುತಿ | ಗುಣದಿ ಬಂಧಿತವಾದ

ಅನಿಲಮತವೆಂಬ ತೊಟ್ಟಲದಿ

ವನಜನಾಭನ ಧ್ಯಾನ ಯೋಗ ನಿದ್ರೆಯ ಮಾಳ್ಪ

ಕನಕ ಶಯ್ಯಾತ್ಮಜರ ತೊಗಿರೆ 1


ಯುದ್ಧದಿ ಸಾರಥಿ ಪದ್ಮಮಿತ್ರಜಗಾದ

ಮದ್ರದೇಶಾಧಿಪರ ತೂಗಿರೆ

ವೃದ್ಧಾಶ್ರವಾರ್ಯರ ಸದ್ಮನದಿ ಶಿಶುವಾಗಿ

ಉದ್ಭವಿಸುವರ ತೂಗಿರೆ 2


ಶಾಮಸುಂದರ ಸ್ವಾಮಿ ಧಾಮ ಪದಾರ್ಹರ

ಪ್ರೇಮವ ಪಡೆದವರ ತೂಗಿರೆ

ಶ್ರೀಮನ್ ಮಾನವಿಯಲ್ಲಿ ನೇಮದಿ ಭಜಿಪರ

ಕಾಮಿತ ಕೊಡುವವರ ತೂಗಿರೆ 3

***


No comments:

Post a Comment