ಮುದ್ದು ಕೃಷ್ಣ ಮುನಿ ಶರಣ
ಉದ್ಧರಿಸು ನೀ ಉಡುಪಿ ರನ್ನ ಪ.
ಮುದ್ದೆ ಬೆಣ್ಣೆ ಕೊಡುವೆ ಚೆನ್ನ
ಮಧ್ವಮುನಿಯ ಮನ ಪ್ರಸನ್ನ ಅ.ಪ.
ಬಾಲೆಯರನು ಕೂಡಿ ವನದಿ
ಲೀಲೆಯಿಂದ ಕೊಳಲನೂದಿ
ಕಾಳಿಮಡುವ ಕಲಕಿ ನಿಂದ
ಲೀಲೆ ಕೇಳೆ ಮನಕಾನಂದ 1
ನಿನ್ನ ಮಹಿಮೆ ಅಧಿಕವಾಗಿ
ಎನ್ನ ಮನಕೆ ಹರುಷವಾಗಿ
ಪನ್ನಗೇಂದ್ರಶಯನ ಸ್ವಾಮಿ
ನಿನ್ನ ರೂಪ ತೋರೊ ಪ್ರೇಮಿ 2
ಪೊರೆ ಗೋಪಾಲಕೃಷ್ಣವಿಠ್ಠಲ
ನಿರುತ ನಿನ್ನ ಚರಣ ಕಮಲ
ಮೊರೆಯ ಹೊಕ್ಕೆ ಮರೆಯದೆನ್ನ
ಕರುಣೆಯಿಂದ ಕಾಯೊ ಘನ್ನ 3
****
No comments:
Post a Comment