Wednesday 1 September 2021

ಕಮಲ ಸಂಭವ ನಾಸಿಕಾ ಸಂಭವ ಕಾಯೋ ನಮಿಸುವೆ ನಿನಗೆ ನಾನು ankita vijaya vittala

 .. ..

ರಾಗ : ಮುಖಾರಿ  ತಾಳ : ತ್ರಿವಿಡಿ 


ಕಮಲ ಸಂಭವ ನಾಸಿಕಾ । 

ಸಂಭವ ಕಾಯೋ ।

ನಮಿಸುವೆ ನಿನಗೆ ನಾನು ।। ಪಲ್ಲವಿ ।।

ಅಂದು ಧರಿಣಿ ಜಲ ।

ವಂದಾಗಿ ಕರಗಿರೇ ।

ನಂದನ ಚಿಂತಿಸೆ ।

ಬಂದ ವರಾಹಮೂರ್ತಿ ।। ಚರಣ ।।

ಮಧುಪಾನಾವನ । ಸಾ ।

ದುದು ಅವನ ಚರ್ಮ ।

ಹೊದಿಸಿ ಹೆಪ್ಪುಗೊಟ್ಟು ।

ಮೇದಿನೆಂದಿನಿಸಿದೆ ।। ಚರಣ ।।

ಕನಕಲೋಚನ ಭೂಮಿಯನು 

ಕದ್ದು ವೈಯ್ಯಲು ।

ಅನಿಮಿಷರೊಲಿಸೆ ಅವನ 

ಕೊಂದುದ್ಧರಿಸಿದೆ  ।। ಚರಣ ।।

ಕರುಣಾಕಟಾಕ್ಷದಿ 

ಹೊರವಲ್ಲಿ ನಾನೆಲ್ಲಿ ।

ಸರಿಗಾಣೆ ನಿನಗೆ ಅಂತರ 

ಬಹಿರದೊಳು ।। ಚರಣ ।।

ರಜೋಭಿಮಾನಿಯ 

ವಡಿಯಾ ಸುಜನಪಾಲಾ ।

ಭುಜಗ ಗಿರಿಯ ವಾಸಾ 

ವಿಜಯವಿಠ್ಠಲಾಧೀಶಾ ।। ಚರಣ ।।

***


No comments:

Post a Comment