Friday, 27 December 2019

ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ ankita vyasa vittala

ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ ಪ

ಆಚಾರಿಯೆನಲಿ ಬಹು ದು | ರಾಚಾರಿಯೆನಲಿ ಜನರೆಲ್ಲನೀಚನೆಂದೆನಲಿ ಅನದಿರಲಿ 1

ಜ್ಞಾನಿ ಎಂದೆನಲಿ ದುರ್ಮಾರ್ಗ | ನಾನೆನಲಿ ಜನರೆಲ್ಲ ಬಹು ಮಾನವಂತನೆನಲಿ ಅನದಿರಲಿ 2

ಪಾಪಿಯಾಗಿರಲಿ ಬಹು ಸಂ | ತಾಪಿಯಾಗಿರಲಿ ಜನರೆಲ್ಲಪಾಪಿಯೆಂದೆನಲಿ ಅನದಿರಲಿ 3

ರಾಗವೇ ಬರಲಿ ಬಹು ವೈ | ಭೋಗವೇ ಬರಲಿ ವಿಷಯ ನಿಯೋಗವೇ ಬರಲಿ ಬರದಿರಲಿ 4

ಒಲಿದರೆ ನೀ ವ್ಯಾಸವಿಠಲ ಜನ | ರೆಲ್ಲ ಮತ್ತ್ಹಳಿಯುತಿರಲಿ ಇರದಿರಲಿ ಏನಾದರಾಗಲಿ ಹರಿಯೆ 5
*********

No comments:

Post a Comment