Wednesday, 1 September 2021

ಎಲ್ಲಿ ಶ್ರೀ ಗುರುವಿನ ದಯದೊಲವಿಹುದು ದುರಿತ ಭಯ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎಲ್ಲಿ ಶ್ರೀ ಗುರುವಿನ ದಯದೊಲವಿಹುದು | ದುರಿತ ಭಯ ಮುಟ್ಟ ಲರಿಯದು 1 

ದಿವಸಾಧಿಪನಾ ಮಂಡಲವನು ಸಾರಿಹಗ | ಜವದಿ ಕತ್ತಲೆಯು ಮುಸುಕುವದೇನವಗ 2 

ಸಕಲ ಗಜಗಳು ಮುದದಲಿ ಒಂದಾಗಿ | ಶಕ್ತಿ ಸಿಂಹನ ಮುಂದೆ ನಿಲ್ಲುವವೇ ಪೋಗಿ 3 

ಪ್ರತ್ಯಕ್ಷದಲಿ ಅನಳನಿಹು ಸ್ಥಳದಲಿ | ಮತ್ತೆದೋರುದೇ ಮುಖ ಹಿಮವು ಇದಿರಲಿ 4 

ಕಂದನ ಪ್ರಿಯ ಮಹಿಪತಿಯ | ಸ್ಮರಿಸದೇ | ಅಂಧಕನಂತೆ ಬಾಳುತಿಹಾವರಿಗಲ್ಲದೇ 5

***


No comments:

Post a Comment