..
kruti by ಲಕ್ಷ್ಮೀನಾರಯಣರಾಯರು Lakshminarayanaru
ಮರೆವರೇನೊ ರಾಮ ನಿನ್ನ ಚರಣ ಸೇವಕನನ್ನು
ಪರರಿಗೊಪ್ಪಿಸಿ ಹೀಗೆ ಪ
ಪರಮ ದಯಾನಿಧಿ ಅಲ್ಲವೆ ಮುನ್ನ
ಶರಣರ ಪಾಲಿಸಲಿಲ್ಲವೆ ಇದು
ಸರಿಯೇನೊ ಜನ ನಗರೇನೊ ಇನ್ನು
ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ.
ಗತಿಹೀನರಿಗೆ ನೀ ಗತಿಯೆಂದು | ನೀನೆ
ಪತಿತರ ಪತಿಕರಿಸುವನೆಂದು
ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ
ಗತಿದೋರೆಂದು ಸಾರಿದೆ ಚೀರಿದೆ ದೂರಿದೆ 1
ದೋಷರಾಶಿಗಳೆಲ್ಲ ಅಳಿಸಯ್ಯ
ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ
ದಾಸಾನುದಾಸ ದಾಸನು ಎನಿಸಿ | ಪರಿ-
ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ 2
ಏನು ಸಾಧನವನ್ನು ನಾ ಕಾಣೆ | ನಿನ್ನಾ-
ಧೀನದವನು ನಾ ನಿನ್ನಾಣೆ
ದೀನ ಬಂಧುವೆ ದಯಾಸಿಂಧುವೆ
ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ 3
***
No comments:
Post a Comment