Sunday, 1 August 2021

ಮನ್ನಿಸೆನ್ನ ವೆಂಕಟರನ್ನ ಅನ್ಯಥಾ ಗತಿಗಾಣೆ ನಾ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಮನ್ನಿಸೆನ್ನ ವೆಂಕಟರನ್ನ ಅನ್ಯಥಾ ಗತಿಗಾಣೆ ನಾ ಪ


ಹಲವು ಜನುಮದಿ ಬಂದೆ ಬಲು ಪರಿಯಲಿ ನೊಂದೆ

ತೊಳಲಿ ಬಳಲಿ ನಿಂದೆ ಸಲಹೊ ತಂದೆ 1


ವಾಸವ ವಂದಿತ ಕೇಶವ ಅಚ್ಯುತ

ದಾಸರ ಮನ ಹಿತ ಬಾ ಶಾಶ್ವತ 2


ಲಕುಮಿಕಾಂತನೆ ಎನ್ನ ಉಕುತಿ ಲಾಲಿಸಿ ಘನ್ನ

ಭಕುತಿ ಪಾಲಿಸೊ ಮುನ್ನ ಮುಕುತೀಶನೆ3

***


No comments:

Post a Comment