..
kruti by ಲಕ್ಷ್ಮೀನಾರಯಣರಾಯರು Lakshminarayanaru
ಮಧ್ವಮತವ ಪೊಂದಿ ಭಜಿಸಿರೊ | ಉದ್ಧಾರವಾಗಲು
ಮಧ್ವಮತವ ಪೊಂದಿ ಭಜಿಸಿರೊ ಪ
ಮಧ್ವಮತವ ಪೊಂದಿ ಭಜಿಸಿ
ಶುದ್ಧ ಜ್ಞಾನ ಭಕುತಿಗಳಿಸಿ
ಗೆದ್ದು ಈ ಭವಾಬ್ಧಿಯನ್ನು
ಪದ್ಮನಾಭನ ಪಾದವ ತೋರೆ ಅ.ಪ.
ನಾನೆ ವಾಸುದೇವನೆಂದು
ಹೀನ ಪೌಂಡ್ರಕನು ತಾನು
ಏನು ಗತಿಯ ಕಂಡನೆಂದು
ಜ್ಞಾನದಿಂದ ತಿಳಿದು ಮುನ್ನ 1
ಹರಿಯೆ ಸರ್ವೋತ್ತಮನು | ವಿಶ್ವ
ವಿರುವುದಯ್ಯ ಸತ್ಯವಾಗಿ
ತಾರತಮ್ಯ ಪಂಚಭೇದ
ಸ್ಥಿರವೆಂದು ಸಾರಿಪೇಳ್ವ 2
ಭಕುತಿಯಿಂದ ಸೇವಿಪ ಜನಕೆ
ಮುಕುತಿಯಲ್ಲಿ ನೈಜ ಸುಖವ
ಲಕುಮಿಕಾಂತನು ಪಾಲಿಪನೆಂದು
ಯುಕುತವಾಗಿ ಪ್ರಕಟಿಸಿದಂತ 3
***
No comments:
Post a Comment