Monday, 6 September 2021

ಪಾಲಯ ಮಾಂ ಮಂತ್ರಾಲಯ ಪ್ರಭುವೆ ankita nagashayanavittala

 ankita ನಾಗಶಯನವಿಠಲ

ರಾಗ: ಬೆಹಾಗ್ ತಾಳ: ಅಟ


ಪಾಲಯ ಮಾಂ ಮಂತ್ರಾಲಯ ಪ್ರಭುವೆ


ಪಾಲಯ ಮಾಂ ನತಜನ ಪಾಲಕ ಗುರುವೆ ಅ. ಪ


ಜ್ಞಾನ ಭಕುತಿ ವೈರಾಗ್ಯವೆಂಬ ನಿಜ

ಧನವ ಪಾಲಿಸಿ ಅನುಸಂಧಾನವ ಬಲಿಸೆಂದೆ

ದಾನಿಗಳರರಸೆ ನಿಧಾನಿಸದಲೆ ತ್ವ-

ತ್ಪಾದ ಸಂದರ್ಶನ ಸಲಿಸಿಂದೆ 1

ಗುರು ಕರುಣದಿ ಮನ ಕರಗಿತು ಹರಿಪರ 

ಗುರುಕರಾರ್ಚಿತ ಇದ ಸ್ಥಿರಪಡಿಸೆನ್ನ

ಪರಿಭವಣೆಯ ಸಂಹರಣಗೈಸಿ ಹರಿ

ಶರಣರೊಳಿಡು ಇಹ ಪರದೊಳಗಿನ್ನ 2

ಸ್ವಚ್ಛ ಭಕುತಿ ಸಂಪ್ರೋಚ್ಛದಿ ಅಚ್ಯುತ

ಉಚ್ಛ ನಾಗಶಯನ(ವಿಠಲ)ನ ತೋರೆಂದೆ

ನಿಚ್ಛಣಿಯಂದದೊಳ್ ಇಪ್ಪ ನಿನ್ನ ನಾ

ನೆಚ್ಚಿ ಬೇಡಿದ ಎನ್ನೀ ಈಪ್ಸಿತ ಸಲಿಸೋ 3

***


No comments:

Post a Comment