Friday, 6 August 2021

ವಿಘ್ನೇಶ ಪಾಹಿಮಾಂ ವಿಘ್ನ ನಿವಾರಕ ನಿರ್ವಿಘ್ನದಾಯಕ ankita vijayaramachandra vittala

..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ವಿಘ್ನೇಶ ಪಾಹಿಮಾಂ

ವಿಘ್ನ ನಿವಾರಕ ನಿರ್ವಿಘ್ನದಾಯಕ ಪ


ಭಗ್ನದಂತಾಕಾಶಾಭಿಮಾನಿ

ಮಗ್ನಂ ಕೃತ್ವಾವೋ ಮನ

ಅಗ್ನಿ ನೇತ್ರಸುತ ತವ ಪದದೆ ಅ.ಪ


ಕುಕ್ಷಿ ಮಹಾಲಂಬೋದರ ಇಕ್ಷುಚಾಪಹರ

ಅಕ್ಷತ ಶೋಭಿತ ಗಜಪಾಲ

ರಾಕ್ಷಸ ಮದಹರ ಅಂಕುಶಪಾಶ

ಯಕ್ಷ ಕಿನ್ನರ ವಂದಿತ ಚರಣ 1


ಗಜಾನನ ಮನೋಹರ ಗಾತ್ರ

ಅಜಿನ ಬದ್ಧ ಪ್ರಲಂಬ ಪವಿತ್ರ

ಭಜಕೇಷ್ಟದ ಪರಮ ಸೂತ್ರ

ಸುಜನ ಪಾಪ ಪರ್ವತ ವೀತಿ ಹೋತ್ರ 2


ಚತುರ್ಹಸ್ತ ಮೂಷಕ ಗಮನ

ವಾಯಭುಗ್ ಭೂಷ ಆದಿಪೂಜ್ಯ

ವಿತತ ಮಹಿಮ ಏಕದಂತ ಗಂಧಲೇಪಿತ ವಕ್ಷ

ಪತಿತ ಪಾವನ ವಿಶ್ವೋಪಾಸ್ಯ 3


ವ್ಯಾಸೋಕ್ತ ಪುರಾಣ ಲಿಖಿತನೆ ಶೂರ

ವಿಂಶತ್ಸೇಕ ಮೋದಕ ಭಕ್ಷ

ವಾಸುಕಿ ಬದ್ಧ ಕಟಿ ವಿರಾಜಿತ ಕ್ಲೇಶನಾಶನ ಸುಂದರ

ಆಶಾಪಾಶ ರಹಿತ ಭೂತ ಗಣೇಶ 4


ಹಾಟಕ ಮಣಿಮಯ ಮಕುಟ

ತಟಿತ್ತೇಜ ನಿತ್ಯವಹಿರೂಪ

ಪಟಪಟ ಶಬ್ದಘಟಿತ ಗಜಕರ್ಣ

ನಿಟಿಲಾಕ್ಷ್ಯವಂದ್ಯ ವಿಜಯರಾಮಚಂದ್ರ

ವಿಠಲ ಪೂಜಕ ಶತಸ್ಥ 5

***



No comments:

Post a Comment