Friday, 6 August 2021

ಹರಿಕರ್ತ ನಾನಲ್ಲೆಂದು ಹಿರಿಯರಾಡಿದ ಮಾತು ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಹರಿಕರ್ತ ನಾನಲ್ಲೆಂದು ಹಿರಿಯರಾಡಿದ ಮಾತು

ಅರಿ ಜೀವೋಪಿ ಕರ್ತನೆಂಬ ವಿರೋಧ ಪ


ಸಿರಿ ಅರಸ ತತ್ವೇಶರ ಕೈಯೊಳು

ಚರಿಪಾಧೀನ ಜೀವನಲ್ಲವೆ

ಪರಮ ನಿಷ್ಕ್ರಿಯ ನಾ ಹೀನ ಮನವೆ ಅ.ಪ


ಜಲಾಗ್ನಿ ಸ್ತಂಭ ಜಪ ಕಲಿತ ಮಾತ್ರಕೆ ಪ್ರಾಣಿ

ನಿಲಬಹುದೆ ಅನಲ ಜ್ವಾಲೆಯೊಳು

ಮ್ಯಾಲೆ ಸುಖದಾಸೆಯಿಂದ ಹಲವು ಕರ್ಮಾಚರಿಸಿ

ಗೆಲಬಹುದೆ ನಿಲಯ ಹರಿಕರ್ತನೆಂದ ನುಡಿಗೆ 1


ಬಿಡಿಬಾಯ ಮಾತಿಗೆ ಪೊಡವಿಪ ಒಪ್ಪುವುದಾದರೆ

ಪಡುವದ್ಯಾಕೆ ತದ್ಧಿತಪಃ ಪ್ರಮಾಣ

ಬಿಡುವುಧ್ಯಾಗೆ ಶ್ರುತಿ ಸ್ಮøತಿ ಹರಿ ಆಜ್ಞೆ

ಕೊಡವು ಫಲ ಮನ ವಚನ ಕಾಯ ಏಕವಾಗೋ ತನಕ 2

ಜ್ಞಾನೇಚ್ಛಾಕ್ರಿಯ ಶಕ್ತಿ ಮಿನುಗುವ ಜೀವಕ್ಕೆ

ಅನಾದಿ ನಿತ್ಯ ಸ್ವಭಾವದಲ್ಲೆ

ಜ್ಞಾನಿಗೆ ಕೊಡುವ ಯಥೇಷ್ಟಾಚರಣೆ

ಏನೇನು ಕೂಡದು ಶ್ರವಣಾಧಿಕಾರಿಗೆ 3


ನಾನು ನನ್ನದು ಎಂಬ ಜ್ಞಾನ ಅನುಗಾಲ ಇರಲಾಗಿ

ನೀನು ನಿನ್ನದು ಎಂಬ ವಂಚನೆಯಲ್ಲವೆ

ಹೀನ ಬಿಡದು ಇದರಿಂದ ಅನುಮಾನ ಮಾಡಸಲ್ಲ

ತನ್ನ ಕ್ರಿಯ ಅನ್ಯಕ್ರಿಯದಂತಾಗೋತನಕ ಮನವೆ 4


ಜ್ಞಾತಾಜ್ಞಾತ ಕರ್ಮದೊಳು ಜ್ಞಾತಾನುಷ್ಠಾನ ವಿಶೇಷ

ಪೀತನಾಹ ಶ್ರೀಶ ತಾನು

ನೋತಾಜ್ಞಾತ ಕರ್ಮ ನಿಷ್ಪಲವಲ್ಲವು

ಜ್ಞಾತ ವಿಜಯ ರಾಮಚಂದ್ರವಿಠಲ 5

***


No comments:

Post a Comment