Wednesday, 1 September 2021

ಶಿಶುವಿನ ಯಾತಕ ದೂರವಿರೆ ನಿಶಿದಿನ ನೋಡಲು ಮಾತವರಿದವಾ ankita mahipati

 


ಕಾಖಂಡಕಿ ಶ್ರೀ ಮಹಿಪತಿರಾಯರು

ಶಿಶುವಿನ ಯಾತಕ ದೂರವಿರೆ| ನಿಶಿದಿನ ನೋಡಲು ಮಾತವರಿದವಾ| ಮರಳನೆ ಮಾಡುವರೆ ಪ ಅತಿ ಮೋಹದಿಂದಲಿ ಮೊಲೆಯನು| ಬಾಯೊಳಗಿಟ್ಟರೆ ಸೇವಿಸನು| ಮಿಲೆ ಯಿಲ್ಲದ ಪಾಲ್ಮೊಸರನು| ಕುಡಿಯಲು ತಕ್ಕವನೆ 1 

ಪರಿಪರಿಯಿಂದಲಿ ಮುಂದಕೆ ಕರೆದರೆ|ಸರಕನೆ ಹೆಜ್ಜಿಡನು| ಹರಿ ನಿಮ್ಮುಡುಗೆಯ ಸೆಳೆದು ಕೊಳುತಲಿ| ಮರವನೆ ಏರುವನೆ 2 

ಸುರಜನ ಪಾಲಕ ಮಹಿಪತಿ ನಂದನ|ಜೀವನ ಮೂರುತಿಯಾ| ಕುರುಪಿಡಬಹುದೆನೆ ಮಾನವನೆಂದು| ಲೀಲೆಯ ದೋರುತಿಹ 3

***


No comments:

Post a Comment