Sunday, 5 December 2021

ರಾಜ ಬಾರೊ ಗುರುರಾಜ ಬಾರೊ ರಾಜಾಧಿರಾಜ ಗುರು ankita shreekara vittala RAAJA BAARO GURURAJA BAARO RAAJAADHIRAJA GURU



 ankita ಶ್ರೀಕರವಿಠಲ  


ರಾಜಬಾರೊ ಗುರುರಾಜ ಬಾರೊ

ರಾಜಾಧಿರಾಜ ಗುರು ಪ


ಸಹ್ಲಾದನಣ್ಣ ಬಾರೊ ಪ್ರಹ್ಲಾದರಾಜ

ಬಾಹ್ಲೀಕ ವ್ಯಾಸನಾಗಿ ಉಲ್ಹಾಸದಿಂದ ಬಾರೊ 1

ತುಂಗನಿವಾಸ ಮುನಿಪುಂಗವ ನೀ ಭಕ್ತ

ಜಂಗುಳಿ ಪಾಲಿಸಲು ಸಂಗೀತಪ್ರಿಯ ಬಾರೊ 2

ಚೂತರಸದಿ ಬಿದ್ದ ಪೋತನ ಸಲಹಿದ

ವಾತಸುಮತಾಭ್ಧಿಸಿತಾಕಿರಣ ಬಾರೊ 3

ವಂಧ್ಯಾಂಧರಿಗೆ ಸುಕಂದರಾಕ್ಷಿಗಳ

ಕುಂದದೆ ಕೊಡುತಿಪ್ಪ ಸುಂದರವದನನೆ ಬಾರೊ 4

ನೀ ಕರುಣಾಸಿಂಧು ಬೇಕಾದ್ದು ಕೊಡುತಿರೆ

ಬೇಕೆಂದು ಬೇಡೆ ಪರರ ಶ್ರೀಕರವಿಠಲನಾಣೆ  5

***

ರಾಗ: ಮಿಶ್ರಕಾಪಿ ತಾಳ: ಕವ್ವಾಲಿ/ಏಕ (raga tala may differ in audio)


No comments:

Post a Comment