..
ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ ಪ
ಬೃಂದಾವನಪತಿ ದಯದಿಂದಲೆನಗೆ ಅ
ಫಲಭಾರಗಳಿಂದ ತಲೆವಾಗಿ ಶುಕಪಿಕಕಲಕಲದೊಳು ನಿನ್ನ ತುತಿಸಿ ತುಂಬೆಗಳಗಳರವದಿಂ ಪಾಡಿ ಅಪ್ಸರರಂತೆ ಪೂ-ಮಳೆಯಗರೆವ ತರುಲತೆಯ ಜನ್ಮವನು1
ಕೊಳಲ ಶೃತಿಯ ಕೇಳಿ ಸುಖದ ಸಂಭ್ರಮದಲಿಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿನಳಿನಾಸನದಿ ಮೌನಗೊಂಡು ಪರಮ ಹಂಸಕುಲದಂತೆ ಧ್ಯಾನಿಪ ಹಂಸ ಜನ್ಮವನು 2
ನಖಗಳೆಂಬ ಸಂತತ ಪೂರ್ಣಚಂದ್ರನ್ನಅಕಳಂಕ ನವ ಚಂದ್ರಿಕೆಯನ್ನು ಸವಿದುಸುಖದ ಸುಗ್ಗಿಗಳಲ್ಲಿ ಸೊಕ್ಕಿ ಯೋಗಿಗಳಂತೆಅಖಿಳವ ಮರೆದ ಚಕೋರ ಜನ್ಮವನು3
ಭಾವಜನೈಯನ ಕಡುಚಲ್ವಿಕೆಯನ್ನುಭಾವಿಸಿ ನಿಡುಗಂಗಳಿಂದ ದಣಿದುಂಡುಗೋವಳೇರಂತೆ ಮನೆ ಮಕ್ಕಳ ಹಿಂಗಿ ನಿನ್ನ ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು 4
ತೋಳದಂಡಿಗೆಮಾಡಿ ಹೀಲಿಯ ಚಾಮರವಮೇಲೆ ಎತ್ತಿದ ತಾವರೆ ಗೊಂಡೆಯಿಂದಓಲೈಸಿ ನಿನ್ನನು ಒಲಿಸಿ ಮುಕುತರಂತೆನಾಲೋಕ್ಯ ಸುಖವುಂಬ ಗೋಪರ ಜನ್ಮವನು5
ಕೊಳಲ ಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನನಳಿನನಾಭಾ ಅವಧಾರೆಂದು ಪೊಗಳೇತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನಚೆಲುವ ಸವಿವಂಥ ಗೋಪೇರ ಜನ್ಮವನು 6
ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತಎಂದು ಮೊಸರ ಕಡೆಯುತ್ತಲಿ ನಿನ್ನಅಂದಿನ ಶ್ರುತಿಯೋ ಉಪ್ಪವಡಿಪ ವ್ರಜ-ದಿಂದುಮುಖಿಯರ ಜನ್ಮವ ಸಿರಿಕೃಷ್ಣ7
***
No comments:
Post a Comment