ಕಾಖಂಡಕಿ ಶ್ರೀ ಕೃಷ್ಣದಾಸರು
ನಿರ್ತದೊಡ್ಡದೈಯ್ಯಾ | ಅರ್ತವರಿಗೆಲ್ಲಿದೆ ಭಯವು ಪ
ಗುರುವಿನಂಘ್ರಿಯ ಕಂಡು | ಗುರುದಯ ಪಡಕೊಂಡು | ಚರಿಸುವರಾನಂದ ನುಂಡು 1
ಘನದೆಚ್ಚರುಳ್ಳವಗ | ಬಿನಗುದೈವದ ಸಂಗ | ಆನಿಯೇರಿ ಕುನ್ನಿಯ ಹಂಗ 2
ಮೊಮ್ಮಕ್ಕಳ ಕಂಡಿರೆ | ಗುಮ್ಮನೆಂದರಂಜುವರೆ | ತಮ್ಮನುಭವ ಬಿಡುವರೆ 3
ಮುಂದಾಗುವ-ಹಿತೊಂದು | ಇಂದಿವೆ ಬಾರದ್ಯಾಕೆಂದು | ಮುಂದಗಿಡನು ಎಂದೆಂದು 4
ಮದಿರೆಕೊಂಡವನಂತೆ | ಮದವೇರಿಹ ನಗುತ | ಮಧುಹರನ ಕೊಂಡಾಡುತ 5
ತಂದೆ ಮಹಿಪತಿದಯಾ | ನಂದ ಕವಚದಿ ಕಾಯಾ | ಛಂದ ಮಾಡಿದಾ ಉತ್ಸಾಯಾ 6
***
No comments:
Post a Comment