Tuesday, 3 August 2021

ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿನ್ನ ವಿಶಿಷ್ಟ ಮಹಿಮೆಗಳನು ankita kadarundalagihanumaiah

 ..

ಎಷ್ಟು ಪೊಗಳಲಿ ನಾನು

ಎನ್ನೊಡೆಯ ನಿನ್ನ ವಿ-

ಶಿಷ್ಟ ಮಹಿಮೆಗಳನು

ಭಕ್ತರಿಗೆ ಬಂದಾ ಕಷ್ಟ ಕಳೆಯುವೆಯೋ ನೀನು

ಸುರಕಾಮಧೇನು

ವಿಷ್ಣುವೇ ಪರದೈವವೆಂದು

ದುಷ್ಟರಾಕ್ಷಸರನ್ನೆ ಕೊಂದು

ಸೃಷ್ಟಿಪಾಲಿಪ ಶ್ರೀ ರಮೇಶನೇ

ಇಷ್ಟ ಭಕುತರೊಳು ಶ್ರೇಷ್ಠನೆನಿಶಿದಿ ಪ


ತಾಯಿಯೂ ಬಂದು ಸೇವೆಗೆ ರಘುಪತಿ

ರಾಯನಲೆ ನಿಂದು ಬಯಸಲಿಲ್ಲಾ ಒಂದು

ಶ್ರೀಹರಿಗೆ ಬಂದು

ಕಾಯಬೇಕು ಸುಗ್ರೀವನೆನುತಲಿ

ತೋಯಜಾಕ್ಷಗೆ ಪೇಳಿ ವಾಲಿಯ ಉ-

ಪಾಯದಿಂದಲಿ ಕೊಲಿಸಿ ರವಿಜಗೆ ಸ-

ಹಾಯ ಮಾಡಿದಿ ವಾಯುತನಯನೆ 1


ಕಡಲ ಬೇಗನೆ ಹಾರೀ ಶ್ರೀರಾಮನ

ಮಡದಿಗುಂಗುರ ತೋರಿ ಅಲ್ಲಿದ್ದ ಅಸುರರ

ಜಡಿದೆ ಬಲು ಹೊಂತಕಾರಿ

ಮಾಡಿಯೊ ಸೂರಿ

ಒಡೆಯಗ್ವಾರ್ತೆಯ ಪೇಳಿ ಶೀಘ್ರದಿ

ನಡೆಸಿ ಸೈನ್ಯವ ದಶಮುಖನ ಶಿರ

ಹೊಡೆಸಿದಾಕ್ಷಣ ಲೋಕಮಾತೆಯ

ಒಡಗೂಡಿಸಿದೆಯೋ ಶ್ರೀರಾಮಚಂದ್ರಗೆ 2


ಮೂರು ರೂಪವ ತಾಳ್ದಿ ಮಹಯೋಗ್ಯ ಜನರಿಗೆ

ಸಾರ ತತ್ವವ ಪೇಳ್ದಿ

ಶರಣ್ಹೊಕ್ಕ ಜನರಪಾರ ದುಃಖವ ಶೀಳ್ದಿ

ಮೊರೆಯ ಕೇಳ್ದಿ

ಧೀರ ಕದರುಂಡಲಗಿ ಹನುಮಯ್ಯ

ಸೇರಿದೆನೊ ನಿನ್ನಂಘ್ರಿ ಕಮಲವ

ಗಾರು ಮಾಡದೆ ಸಲಹೊ

ಕರುಣವಾರಿಧಿ ನೀಯೆನ್ನನೀಗಲೆ 3

****


No comments:

Post a Comment