..
'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+
ಸುಂದರಾ ಶ್ರೀರಾಮ ಚಂದ್ರರಾ | ಪಾದಾರವಿಂದಗಳೀಗೆ
ನಾ ವಂದಿಸುವೆ
ವಂದಿಸೂವೆ ಆನಂದಿಸೂವೆ | ಬಹು ಚಂದದಿಂದಲಿ
ನಲಿದಾಡುವೇ ಪ
ಉತ್ತರಾದಿಮಠದ ವಿಚಿತ್ರಗಳು | ಯನ್ನ ನೇತ್ರದಿಕಂಡು
ಪವಿತ್ರಳಾದೇ
ಶ್ರೀ ಸತ್ಯಧ್ಯಾನ ತೀರ್ಥರು ನಿತ್ಯ ಪೂಜಿಸೂವೋ
ಪರಮಾತ್ಮನ ಕಂಡು ಕೃತಾರ್ಥಳಾದೇ 1
ಮೂರ್ಜಗದೊಳಗೆಲ್ಲಾ ಪ್ರಜ್ವಲಿಸುವೊ | ವಜ್ರ
ಮಂಟಪ ವೈಭವನೋಡಿದೆ
ಮಧ್ಯದಲಿ ಮೂಲ ಸೀತಾ ರಾಮ ಕೂತದ್ದು
ನೋಡಿ ಉಧೃತಳಾದೇ 2
ಸತ್ಯಧ್ಯಾನರು ಎತ್ತಿ ಮಾಡುವಂಥ | ಮಂಗಳಾರ್ತಿಯನೆ ಕಂಡೆನೇ
ಮುತ್ತು ಮಾಣಿಕ್ಯದಾ ನವರತ್ನದಾ ಚಾಮರ ಎತ್ತಿ ಬೀಸುವ
ವಿಸ್ತರ ನೋಡಿದೆ3
ವುಂಡುವುಂಡು ಲೋಕದೊಳಗೆಲ್ಲ ಜನರು
ಕೊಂಡಾಡುವುದ ನಾ ಕೇಳಿದೆ
ಪಂಡಿತರೆಲ್ಲಾ ಹಿಂಡು ಹಿಂಡಾಗಿ ಅಖಂಡ ದಕ್ಷಿಣೆ
ಪಡೆವುದ ನೋಡಿದೆ 4
ಸತ್ಯಬೋಧರು ಸತ್ಯಸಂಧರು ಮೊದಲಾಗಿ
ಮುಟ್ಟಿಪೂಜಿಸಿದ ಮೂರ್ತಿಯು
ಮತ್ತೆ ಕುಬೇರನ ಅಳಕಾ ಪಟ್ಟಣವೇ ಪ್ರತ್ಯಕ್ಷ ಬಂದಿರುವುದಿಲ್ಲಿ 5
ಬೆಳ್ಳಿ ಭಂಗಾರದ ಮಿಳ್ಕೆ, ತಂಬಿಗಿ ಢಾಲಿಯನು ಕೈಯಲಿ
ಜನರು ಕೊಂಡೊಯ್ವರು
ಸುಳ್ಳಲ್ಲಿ ಈ ಮಾತು ಒಳ್ಳೇ ಜನರು ಕೇಳಿ ಬಲ್ಲಷ್ಟು ಪೇಳುವೆನು
ಭಾಳಿರುವುದು 6
ಧಿಟ್ಟ ಶ್ರೀರಾಮರ ದಯದಿಂದಲೀಗ
ಪ್ರತ್ಯಕ್ಷವೈಕುಂಠವೆನಿಪುದೂ
ದುಷ್ಟಜನರಸೂಯೆ ಬಟ್ಟರೆ ಯಮಪಟ್ಟಣದ
ದಾಯಪಿಡಿವರೂ 10
ದೋಷರಹಿತ ವೇದವ್ಯಾಸದೇವರ ಸಂಪುಟ ಲೇಸಾಗಿ
ನೋಡಿ ಸಂತುಷ್ಟಳಾದೇ
ಕಾಶಿಮೊದಲಾದ ಸುಕ್ಷೇತ್ರಗಳು ವಾಸವಾಗಿರುವುವು
ಈ ಮಠದಲಿ 11
ಮರುತನಧೀಷ್ಟಾನರಾಗಿ ಮಾಡುವರು ಈ ಪೂಜೆ
ಮತ್ಯಾರಿಗೀಡಿಲ್ಲನೋಡು
ಹೆಚ್ಚಿನ ಶಾಸ್ತ್ರ ವಿಚಾರ ಮಾಡುವರು
ಸೃಷ್ಟಿವೊಳಗಿನವರಿಗೀಡಿಲ್ಲನೋಡು 12
ವಾದಿಮತದ್ವಾದಿನೀ ಸೋಲಿಸುವರು | ಮಾಯಮತಿಗಳ
ಮಾಯಮಾಡುವರೂ
ನ್ಯಾಯ ವ್ಯಾಕರಣ ವೇದಾಂತ ಸಿದ್ದಾಂತಗಳನ್ನು ಬಾಯಿ
ಪಾಠದಿಬೋಧಿಸುವರೂ 13
ನರಸಿಂಹ ವಿಠಲನದಯದಿಂದಲೀ ನರಲೋಕ
ಸುರಲೋಕ ಪೂಜ್ಯರಿವರೂ
ವರ ಪೀಠದಲಿ ಕುಳಿತು ಮೆರೆಯುವರು | ಜಗದ್ಗುರು
ಶಿರೋಮಣಿಯೆಂದು ಕರೆಸಿಕೊಳ್ಳುವರೂ 14
****
No comments:
Post a Comment