Friday, 1 October 2021

ಸದರವಲ್ಲವೊ ನಿಜ ಭಕುತಿ ಸತ್ಯ ಸದಮಲ ಗುರು purandara vittala SADARAVALLAVO NIJA BHAKUTI SATYA SADAMALA GURU



ಸದರವಲ್ಲವೊ ನಿಜ ಭಕುತಿ, ಸತ್ಯ
ಸದಮಲ ಗುರು ಕರುಣಾನಂದ ಮೂರುತಿ

ಅಡಿಯಲಂಬರ ಮಾಡೋ ತನಕ, ಅಗ್ನಿ
ಕಡಲುಂಡು ಮಲಿನ ಕೊನೆ ನೀಗೋ ತನಕ
ಒಡಲಿಬ್ಬರೊಂದಾಗೋ ತನಕ, ಆ
ಹಡೆಯದಂಥ ಹೆಣ್ಣು ಪ್ರಸವಾಗೋ ತನಕ

ನಾಡಿ ಹಲವು ಕೂಡೋ ತನಕ, ಬ್ರಹ್ಮ
ನಾಡಿ ಪೊಕ್ಕು ನಲಿದಾಡುವ ತನಕ
ಕಾಡುವ ಕಪಿ ಸಾಯೋ ತನಕ , ಸುಟ್ಟು
ಕಾಡಿನೊಳು ರಸ ತೊಟ್ಟಿಡೋ ತನಕ

ಆದಿಕುಂಭವ ಕಾಂಬೋ ತನಕ, ಅಲ್ಲಿ
ಸಾಧಿಸಿ ಅಮೃತ ಸವಿದುಂಬೋ ತನಕ
ಬಾಧೆ ಸಹಿಸಿ ಕೊಂಬೊ ತನಕ, ಆದಿ
ಪುರಂದರವಿಠಲನ ಸ್ಮರಿಸೋ ತನಕ
***

ರಾಗ ನಾದನಾಮಕ್ರಿಯಾ ಅಟ ತಾಳ (raga, taala may differ in audio)

pallavi

sadharavallavo nija bhakuti satya sadamala guru karuNAnanda mUruti

caraNam 1

aDiyalambara mADO tanaka agni kaDaluNDu malina kone nIkO tanaka
oDalibbarontAgO tanaka A haDeyadantha heNNu prasavAgO tanaka

caraNam 2

nADi halavu kUDO tanaka brahma nADi pokku nalitADuva tanaka
kADuva kapi sAyO tanaka suTTu kADinoLu rasa toTTiDO tanaka

caraNam 3

Adi kumbhava kAmbO tanaka alli sAdhili amrta savidumbO tanaka
bAdhe sahisi kombo tanaka Adi purandara viTTalana smarisO tanaka
***


No comments:

Post a Comment