..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ
ನೀ ಪರಿಹರಿಸು ಜೀಯ್ಯಾ ಪ
ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ
ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ
ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ
ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1
ಸುರಪನ ಗರ್ವವ ಹರಣವ ಮಾಡಿ ನೀ
ವರವಿತ್ತೆ ಕಾಳಿಂಗ ಉರಗನಿಗೆ
ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ
ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2
ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ
ಮರೆಯೋದು ಯನ್ನನು ಸರಿಯೆನೊ ಹರಿಯೆ
ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ
ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3
***
No comments:
Post a Comment