..
kruti by bhupati vittalaru ( kakhandaki Ramacharyaru)
ನಿನ್ನವನು ನಾನಯ್ಯ ಅನ್ಯರವನಲ್ಲಾನಿನ್ನ ಕರುಳಿನ ಬಳ್ಳಿ ಕುಡಿ ಮಹಿಪತಿರಾಯ ಪ
ನಿನ್ನ ಪೌತ್ರನ ಮಗಳ ಬಳ್ಳಿಯೊಳು ಜನಿಸಿ ನಾನಿನ್ನ ಮಹಿಮೆಯ ಗುರುತ ಅರಿಯಲಿಲ್ಲಾಸಣ್ಣವನು ನಾನೀಗ ತಪ್ಪು ಒಪ್ಪಿದ ಮೇಲೆಇನ್ನು ದಯಮಾಡು ಮುತ್ತಜ್ಜ - ಅಜ್ಜರ ಅಜ್ಜ 1
ನಿನ್ನ ಕರುಳಿನ ಬಳ್ಳಿ ಎಲ್ಲಿ ಹುಟ್ಟಿದರೇನುಮೂಲದಿಂದಲ್ಲವೇ ಕುಡಿಗೆ ಆಹಾರಮೂಲಕುಡಿಗಳ ಮರೆತು ಆಹಾರ ಕೊಡದಿರಲುಕುಡಿಯು ಬಾಡುವದಿಲ್ಲವೇನೊ ತಾತಯ್ಯ 2
ನಿನ್ನವನು ನಾನೆಂದು ಒಪ್ಪಿಸಿದ ಗುರುರಾಯಇನ್ನು ಸಲಹುವ ಭಾರ ನಿನ್ನದಯ್ಯಾನಿನ್ನ ಘನತೆಗೆ ಕೂಂದು ತರದಂತೆ ಕಾಪಾಡುಘನ್ನ ಭೂಪತಿ ವಿಠಲನ ತೋರು ದಯಮಾಡು 3
***
No comments:
Post a Comment