..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ವೃಂದಾವನಾಚಾರ್ಯರ ಭಾವಿಸಮೀರರ
ವೃಂದಾವನದಿ ಶಾಸ್ತ್ರದ ವೃಂದವನೆ ಪಠಿಸುತ
ಚಂದದಿ ಲೋಕದೊಳಗತ್ಯಂತ ಪೂಜ್ಯರ
ನಮಿಸುವೆನು ವಿಶ್ವಪ್ರಿಯರ ಪ
ವಿಷ್ಣುತೀರ್ಥರ ಪೀಠದಿ ವಾಸಿಸಿ ವಾಸಿಷ್ಠ
ಕೃಷ್ಣನ ದಯದಿ ದ್ವಾದಶಾಬ್ದಗಳಲ್ಯುಪೋಷಣ
ಕೃಷ್ಣನೊಳಗರ್ಪಿಸಲು ಪ್ರೇಮದಿ ಕೃಷ್ಣ
ಭೂಪನು ರತ್ನ ಮಂಟಪವನ್ನೆ ನಿಮಗರ್ಪಿಸಿದನು 1
ಕೇರಳ ನೃಪವರ್ಯನು ನಿಮ್ಮಯ ಶಿಷ್ಯವರ್ಯ-
ನಾಗಿರುತಿಹನು ಸಾರಮಧ್ವಾಗಮವ
ನಿಮ್ಮೊಳಗೋದಿ ಪಂಡಿತವರ್ಯ-
ನೆನಿಸುತ ವೀರ ವಿಷ್ಣುಭಕ್ತನಾದನು 2
ರಾಜೇಶ ಹಯಮುಖನ ಕಿಂಕರರೊಳು
ನಿಮಗೆಣೆ ನಾ ಕಾಣೆನು
ರಾಜರಾಜರು ಪೊಂದದಿರುತಿಹ ನಾಕಿನಾಥನ
ಪದವನೇರುವ ಗುರುವರ್ಯರನೆ ನಮಿಪೆ 3
***
No comments:
Post a Comment