..
ಕರುಣಾಸಾಗರ ವಿಶ್ವ ಕಾಯೋ ಎನ್ನ ಪ
ಪರಮಾತ್ಮ ನೀ ದೂರ ಮಾಡಿದರೆ ಗತಿಯೇನು ಅ.ಪ
ನಿನ್ನ ಲೋಕಕೆ ಎನ್ನ ವೈದಾಗ ಕರುಣಾತ್ಮ
ನಿನ್ನ ಕ್ರಿಯ ಗುಣ ರೂಪ ತೋರಿ ಎನಗೆ
ನಿನ್ನ ಪರಿವಾರ ಜನರಲ್ಲಿ ಸೇರಿಸಿ ಪರಮ
ಧನ್ಯನಾ ಮಾಡಯ್ಯ ಮದ್ಬಿಂಬ ಮಾರಮಣ 1
ಸ್ಮøತಿ e್ಞÁನ ಮನ ಬುದ್ಧಿ ಮಾತ್ರ ಭೂತವು ಕರಣ
ಧಾತು ಸಪ್ತಕ ಪಂಚ ಕೋಶಗಳಲಿ
ಸತಿ ಸಹಿತ ಪ್ರಥಮಾಂಗನಲಿ ಕುಳಿತು ನೀ ಸತತ
ಪ್ರತಿ ತತ್ವ ವ್ಯಾಪಿಸಿ ಜೀವಕರ್ಮವ ಮಾಳ್ಪೆ 2
ಚತುರ ದಶಲೋಕದಲಿ ಪ್ರತಿದೇಹರಥ ನಿನಗೆ
ಕೃತಿರಮಣ ಸರ್ವತ್ರ ನಿನ್ನ ಲೀ¯
ಅತಿಭಕ್ತಿಯಲಿ ಬ್ರಹ್ಮ ಸತಿ ರಮಣ ಸುರರೆಲ್ಲ
ಗತನಿದ್ರರಾಗಿನ್ನು ನೋಳ್ಪರೈ ಮಹಚಿತ್ರ 3
ಕಂಡ ಕಡೆಯಲಿ ಪೂಜೆ ಭಂಡಾರ ತುಂಬಿಹುದು
ತೊಂಡ ವಿಧಿ ಶಿವ ಸುರರು ಸರ್ವತ್ರ ನಿನ್ನ
ಕಂಡು ಪೂಜಿಪರಯ್ಯಾ ಪೂರ್ಣ ವಿಭವಗಳಿಂದ
ಮಂಡÉ ಬಾಗಿದೆ ಭಕ್ತ ತಂಡದಲಿ ಇಡು ಎನ್ನ 4
ಪೂಜ್ಯ ಪೂಜಕನಾಗಿ ಪರಿಪೂರ್ಣ ವೈಭವದಿ
ಪೂಜಿಸುವೆ ನಿನ್ನ ನೀ ಸರ್ವಕಾಲ
ಭೋಜ್ಯ ಭೋಕ್ತøನಾಗಿ ಆನಂದ ಸಿರಿಗೀವೆ
ಅಜರುದ್ರ ಸುರಗಣಕೆ ಉಣಿಸಿ 5
ಹದಿನೆಂಟು ನರಮುಖವು ಮಧ್ಯ ಗಜಮುಖ ದೇವ
ಪದವೆರೆಡು ಭುಜ ನಾಲ್ಕು ಪದುಮೆ ರಮಣ
ಉದಯಾರ್ಕ ಕಿರೀಟ ಕುಂಡಲಭೂಷ
ಗದೆ ಪದುಮ ಆರೆ ಶಂಖ ಮಣಿಯುಕ್ತ ಮಾಲಧರ 6
ವಿಶ್ವತೈಜಸ ಮೂರ್ತಿ ಜಯೇಶವಿಠಲ
ವಿಶ್ವನಾಮಕ ವಿಶ್ವವ್ಯಾಪ್ತಗುಪ್ತ
ಉಚ್ಛ್ವಾಸ ಬಿಡುತಿಹೆನೊ ಉಡುಗಿ ಸಕಲ ಶಕ್ತಿ
ಉತ್ಸಾಹ ನೀಡಯ್ಯ ಸ್ವಾಂತರದಿ ಕಲೆತೆನ್ನ 7
***
No comments:
Post a Comment