Thursday, 5 August 2021

ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆ ankita kamalanabha vittala

kruti by Nidaguruki Jeevubai

ರಾಗ - : ತಾಳ -


ಸ್ಮರಿಸುವರ ಪಾಲಿಪ

ಬಿರುದು ಭಕುತರ ಪೊರೆವ ಕರುಣಿಯೆ ll ಪ ll


ಪರಿಪರಿ ವಿಧದಲಿ ಪರಿತಪಿಸುವರನು

ಕರವಿಡಿದುದ್ಧರಿಸುತ ಸಂತೈಸುವ

ಉರಗಾದ್ರಿವಾಸವಿಟ್ಠಲ ಸಂತೈಸು

ಚರಣಕಮಲಗಳಿಗೆರಗಿ ಬಿನ್ನೈಸುವೆ ll 1 ll


ಮಂದಮತಿಯು ನಾನೆಂದು ವಂದಿಪರ

ಬಂಧನ ಕಳೆಯುತ ಮುಂದೆ ಗತಿಯು ತೋರಿ

ತಂದೆವೆಂಕಟೇಶವಿಟ್ಠಲ ಭಕುತರ

ಸಂದಣಿ ಪೊರೆಯುವರೆಂಬ ಬಿರುದು ದೇವ ll 2 ll


ಆಶಾಪಾಶಗಳಿಗೊಳಗಾಗುವ ಮನ-

ದಾಸೆ ಪೂರೈಸುತ ನೀ ಸಲಹೈ ಗುರು

ವಾಸುದೇವವಿಟ್ಠಲ ಹರಿ ಭಕುತರ

ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ ll 3 ll


ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ

ಒದಗಿದ ಪಾಪದಿ ಹೆದರುತಲಿದೆ ಮನ

ಪದುಮಜಾಂಡ ಸೃಜಿಸಿದ ಪರಮಾತ್ಮನಿ-

ಗದ್ಭುತವೇ ಪಾಮರರನು ಪೊರೆವುದು ll 4 ll


ಮಣಿದು ಬಿನ್ನೈಸುವೆ ಪವನಮತವ ತೋರಿ

ಬಿನಗು ಬುದ್ಧಿಗಳ ಗಮನಕೆ ತಾರದೆ

ಕಮಲನಾಭವಿಟ್ಠಲ ತವ ಕರುಣದಿ

ಮನದ ಕ್ಲೇಶಗಳ ಕಳೆದು ಉದ್ಧರಿಸುತ ll 5 ll

***


ಸ್ಮರಿಸುವರ ಪಾಲಿಪ

ಬಿರುದು ಭಕುತರ ಪೊರೆವ ಕರುಣಿಯೆ ಪ


ಪರಿಪರಿವಿಧದಲಿ ಪರಿತಪಿಸುವರನು

ಕರವಿಡಿದುದ್ಧರಿಸುತ ಸಂತೈಸುವ

ಉರಗಾದ್ರಿವಾಸ ವಿಠ್ಠಲ ಸಂತೈಸು

ಚರಣಕಮಲಗಳಿಗೆರಗಿ ಭಿನ್ನೈಸುವೆ1


ಮಂದಮತಿಯು ನಾನೆಂದು ವಂದಿಪರ

ಬಂಧನ ಕಳೆಯುತ ಮುಂದೆ ಗತಿಯು ತೋರಿ

ತಂದೆ ವೆಂಕಟೇಶ ವಿಠ್ಠಲ ಭಕುತರ

ಸಂದಣಿ ಪೊರೆಯುವರೆಂಬ ಬಿರುದು ದೇವ 2

ಆಶಾಪಾಶಗಳಿಗೊಳಗಾಗಿಹ ಮನ-

ದಾಸೆ ಪೂರೈಸುತ ನೀ ಸಲಹೈ ಗುರು

ವಾಸುದೇವ ವಿಠ್ಠಲ ಹರಿ ಭಕುತರ

ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3

ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ

ಒದಗಿದ ಪಾಪದಿ ಹೆದರÀುತಲಿದೆ ಮನ

ಪದುಮಜಾಂಡ ಸೃಜಿಸಿದ ಪರಮಾತ್ಮನಿ-

ಗದ್ಭುತವೇ ಪಾಮರರನು ಪೊರೆವುದು 4

ಮಣಿದು ಬಿನ್ನೈಸುವೆ ಪವನಮತವÀ ತೋರಿ

ಬಿನಗು ಬುದ್ಧಿಗಳ ಗಮನಕೆ ತಾರದೆ

ಕಮಲನಾಭ ವಿಠ್ಠಲ ತವ ಕರುಣದಿ

ಮನದ ಕ್ಲೇಶಗಳ ಕಳೆದು ಉದ್ಧರಿಸುತ 5

***


No comments:

Post a Comment