🌹🌹ಪದ್ಮದ ರಂಗೋಲೆ🌹🌹 ( sampradayada hadu)
ಅಂದಾದ ರಂಗವಾಲಿಯನ್ಹಾಕಿದೇವನ ಮುಂದೆ
ಅನಂತ ಪುಣ್ಯವ ಗಳಿಸಿಕೊಳ್ಳಿ||ಪಲ್ಲ||
ಗೌರಿ ಪುತ್ರನ ಚರಣಕ್ಕೆ ಎರಗಿ
ವರವ ಬೇಡುತ ಸರಸ್ವತಿ ದೇವಿಗೆ
ಹರುಷದಿ ಹಾಕುವ ರಂಗವಾಲಿಯ
ಅರುಹುವೆ ನಿಮಗೆ ಅತಿ ಭಕ್ತಿಯಿಂದ||೧||
#ಹುಣ್ಣಿಮೆ #ಮುಂದಿನ #ಏಕಾದಶಿ #ದಿನದಿ
#ಬೃಹಸ್ಪತಿ #ವಾರವು #ಬಂದಿರಲಾಗ
#ಒಂಬತ್ತು #ಪದ್ಮವ #ಹಾಕಬೇಕೆಂದು
#ಹಿರಿಯರು #ಪೇಳಿದ #ರೀ #ಮಾತ||೨||
ಶುಧ್ಧ ಸ್ನಾನವ ಮಾಡಿ ಮಡಿಯುಟ್ಟು
ದೇವನಮುಂದೆ ರಂಗವಾಲಿಯನ್ಹಾಕಿ
ಅರಿಷಿಣ ಕುಂಕುಮ ದೀಪ ಧೂಪದಿ
ಹುಣ್ಣಿಮೆ ವರಿಗೆ ಹಾಕಬೇಕೆನುತ||೩||
#ಒಂಬತ್ತು #ಶಂಖು #ಚಕ್ರ #ಪದ್ಮವ #ಹಾಕುತ್ತ
#ಒಂಬತ್ತು #ವರುಷವು #ನಿಷ್ಟೆಯಿಂದಲಿ
#ಸುವರ್ಣದ #ಪದ್ಮವ ಮಾಡಿಸುತ್ತಲಿ
ಬ್ರಾಹ್ಮಣರಿಗೆ ದಾನ ಕೊಡಬೇಕೆನ್ನುತಲಿ||೪||
ಪವಿತ್ರವಾದ ವ್ರತ ದಾವುದೆನ್ನುತ
ರುಕ್ಮಿಣಿ ಹರಿಯ ಕೇಳುತಲಿರಲು
ಶ್ರೀ ಕೃಷ್ಣನು ನುಡಿದನು ನಸುನಗುತಲಿ
ಈ ಪದ್ಮದ ರಂಗೋಲೆ ಹಾಕಬೇಕೆನುತ||೫||
ಕಷ್ಟ ದಾರಿದ್ರ್ಯ ವು ದೂರ ಸರಿಯುವವು
ಶ್ರೇಷ್ಟ ಜೀವನ ಸಾಗಿ ಹೋಗುವುದು
ಲೋಲನ ದಯವು ದೊರಿಯುವದೆಂದು
ಹಯವದನನು ತಾ ನುಡಿದಿಹನಂದು||೬||
ನಾರಿಯರಿಗೆ ಬಂದ ರಜಸ್ವಲ ದೋಷವು
ದೂರವಾಗುವುದೆಂದು ಕೃಷ್ಣನು ನುಡಿಯೆ
ಸಾರಸಮುಖಿಯರು ಸರಸದಿಂದಲಿ ಹಾಕಿ
ಮಧ್ವೇಶಕೃಷ್ಣನ ದಯ ಪೊಂದಲೆಂದು||೭||
***
No comments:
Post a Comment