..
kruti by ಬೇಲೂರು ವೈಕುಂಠ ದಾಸರು belur vaikunta dasaru
ಪಾಲಿಪುದು ನಯನಗಳ ನಾಲಿಗೆಯ ನೀನು
ಶ್ರೀಲೋಲ ಸಾರ್ವಭೌಮನೇ ಪ
ನೀಲಮೇಘಶ್ಯಾಮ ಬೇಲಾಪುರಾಧೀಶ
ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ
ಪರಮಪದನಾಥ ಇಂದಿರೆಯರಸ ಸಕಲ ನಿ
ರ್ಜರರು ಪೂಜಿಸುವಂಘ್ರಿಯಾ
ಶಿರಿಯನೀಕ್ಷಿಸಿ ಬದುಕಿ ಪದ ನಾಮಾ ಸುಳಾದಿ
[ವರ]ನೇಮದಿಂ ಪಾಡೀ ಆಡೀ
ಮೊರೆಯೊಕ್ಕು ಬದುಕಿ ಆವರಿಸಿಕೊಂಡಗಲದಿಹ
ದುರಿತಭವ ಶರಧಿಯಾ
ಪಿರಿದು ದಾಟುವೆನೆಂದು ಭರದೊಳೈದಿದವಗಾ
ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1
ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು
ದಿಂದು ಊನನಲ್ಲಾ
ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು
ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ
ನಂದವಳಿದುಬ್ಬಸದೊಳು
ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ
ವೃಂದಗಳು ನಿಂದಿರುವವೆ ಸ್ವಾಮಿ 2
ಮನುಜ ಮಾಡಿದ ಪಾತಕಗಳನು ಎಣಿಸುವಡೆ
ಘಣಿರಾಜಗಳವಡುವುದೇ
ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ
ರಣಜನರೊಳೇಂಪುರುಳಿರುವುದೇ
ಚಿನುಮಯನೆ ಭಕ್ತವತ್ಸಲನೆ ಅಚ್ಚುತz
ಸನವಗುಣಗಳನೀ ಮರೆದು
ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ
ಧನ್ಯನೆಲೊ ವೈಕುಂಠರಮಣಾ 3
***
No comments:
Post a Comment